ನವದೆಹಲಿ: ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೈಜಿರೀಯಾ ತಂಡ ಐವರಿ ಕೋಸ್ಟ್ ತಂಡವನ್ನು ಕೇವಲ 7ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ಬ್ಯಾಟಿಂಗ್ ಆಯ್ದುಕೊಂಡಿತು. 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 271 ರನ್ ಕಲೆಹಾಕಿತು. ಸಲೀಂ 53 ಎಸೆತಗಳಲ್ಲಿ 112 ರನ್, ಐಸಾಕ್ ಒಕ್ಪೆ 23 ಎಸೆತಗಳಲ್ಲಿ 65 ರನ್, ಸುಲೈಮಾನ್ 50 ರನ್ ಸಿಡಿಸಿದ್ದರು.
ಈ ಕಠಿಣ ಗುರಿ ಬೆನ್ನಟ್ಟಿದ ಐವರಿ ಕೋಸ್ಟ್ ತಂಡವು 7.3 ಓವರ್ಗಳಲ್ಲಿ ಕೇವಲ 7 ರನ್ಗಳಿಸಿ ಆಲೌಟ್ ಆಯಿತು. ತಂಡದ 7 ಜನ ಬ್ಯಾಟರ್ಗಳು ಸೊನ್ನೆ ಸುತ್ತಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ 4 ರನ್‌ಗಳಿಸಿದರೆ, ಇಬ್ರಾಹಿಂ, ಅಲೆಕ್ಸಿ ತಲಾ 1 ರನ್‌ಗಳಿಸಿದರು.
ಈ ಮೂಲಕ ನೈಜಿರೀಯಾ ತಂಡವು 264 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೃಹತ್ ರನ್ಗಳ ಅಂತರದಿಂದ ಗೆದ್ದ ದಾಖಲೆ ಪಟ್ಟಿಯಲ್ಲಿ ನೈಜಿರೀಯಾ ಮೂರನೇ ಸ್ಥಾನಕ್ಕೇರಿದೆ.
ಈ ಹಿಂದೆ ಅತ್ಯಂತ ಕಡಿಮೆ ರನ್‌ಗಳಿಗೆ ಆಲೌಟ್ ಆದ ದಾಖಲೆ ಮಂಗೋಲಿಯಾ ತಂಡದ ಹೆಸರಿನಲ್ಲಿತ್ತು. ಅದು ಕೇವಲ 10 ರನ್‌ಗಳಿಗೆ ಆಲೌಟ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.