ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ಪುರುಷರ ತಂಡದವರು ಜೆ.ಯು. ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆಶ್ರಯದ ಕಾಲೇಜು ಪ್ರೀಮಿಯರ್ ಲೀಗ್ (ಸಿಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಬುಧವಾರ ನಡೆದ ಫೈನಲ್‌ನಲ್ಲಿ ಜೈನ್ ವಿ.ವಿ ತಂಡ 6 ವಿಕೆಟ್‌ಗಳಿಂದ ಎಸ್.ಜೆ.ಸಿ.ಸಿ ತಂಡವನ್ನು ಪರಾಭವಗೊಳಿಸಿತು. ಜೈನ್ ತಂಡದ ಆದಿತ್ಯ ಗೋಯಲ್ ಬೌಲಿಂಗ್‌ನಲ್ಲಿ ಮೋಡಿ ಮಾಡಿದರು. 23 ರನ್ ನೀಡಿದ ಅವರು ಮೂರು ವಿಕೆಟ್ ಉರುಳಿಸಿದರು. ರೋಹನ್ ನಾಯ್ಕರ್ (61ರನ್) ಅರ್ಧಶತಕದ ಸಂಭ್ರಮ ಆಚರಿಸಿದರು.
ಸಂಕ್ಷಿಪ್ತ ಸ್ಕೋರ್: ಎಸ್.ಜೆ.ಸಿ.ಸಿ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 126 (ಜಯೇಶ್ ಬಾಬು 44; ಆದಿತ್ಯ ಗೋಯಲ್ 23ಕ್ಕೆ3, ವರ್ಷಿತ್ ರೆಡ್ಡಿ 23ಕ್ಕೆ2).
ಜೈನ್ ವಿಶ್ವವಿದ್ಯಾಲಯ: 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 127 (ರೋಹನ್ ನಾಯ್ಕರ್ 61, ಅಮನ್ ಖಾನ್ 20, ಕೆ.ಕಿಶೋರ್ 25).
ಫಲಿತಾಂಶ: ಜೈನ್ ವಿಶ್ವವಿದ್ಯಾಲಯ ತಂಡಕ್ಕೆ 6 ವಿಕೆಟ್ ಗೆಲುವು ಹಾಗೂ ಪ್ರಶಸ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.