ನವದೆಹಲಿ: ಕೊರೊನಾ ಹಾವಳಿಯ ನಂತರ ಕ್ರಿಕೆಟ್ ಆರಂಭವಾದ ಮೇಲೆ ಚೆಂಡು ಸ್ವಿಂಗ್ ಆಗಲು ಎಂಜಲು ಬಳಸಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಎಂಜಲಿಗೆ ಅಷ್ಟೇನೂ ಮಹತ್ವ ಇಲ್ಲ ಎಂದು ವೇಗದ ಬೌಲರ್ ಜಯದೇವ ಉನದ್ಕತ್ ಅಭಿಪ್ರಾಯ ಪಟ್ಟಿದ್ದಾರೆ.
‘ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್ ದೊಡ್ಡ ವಿಷಯವಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಪ್ರತಿ 25 ಓವರ್‌ಗಳಿಗೆ ಹೊಸ ಚೆಂಡನ್ನು ಬಳಸಲಾಗುತ್ತದೆ. ಅದಕ್ಕೆ ಎಂಜಲು ಹಚ್ಚುವ ಅಗತ್ಯವಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.