ಲಂಡನ್ (ಎಎಫ್‌ಪಿ): ಆತಿಥೇಯ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಮತ್ತು ಮಧ್ಯಮ ವೇಗಿ ಜೊಫ್ರಾ ಆರ್ಚರ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ದಂಡ ವಿಧಿಸಿದೆ.
ಟ್ರೆಂಟ್ ಬ್ರಿಜ್‌ನಲ್ಲಿ ಸೋಮವಾರ ನಡೆದಿದ್ದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ‘ಶಿಕ್ಷೆ’ ವಿಧಿಸಲಾಗಿದ್ದು ಪಂದ್ಯದ ಸಂಭಾವನೆಯ 15 ಶೇಕಡಾ ಮೊತ್ತವನ್ನು ಪಡೆಯಲು ನಿರ್ಧರಿಸಲಾಗಿದೆ.
ಪಾಕಿಸ್ತಾನ ಇನಿಂಗ್ಸ್ ವೇಳೆ ತಂಡದ ಸಹ ಆಟಗಾರ ‘ಮಿಸ್‌ಫೀಲ್ಡ್’ ಮಾಡಿದ ಸಂದರ್ಭದಲ್ಲಿ ಅಸಭ್ಯ ಪದ ಬಳಸಿದ್ದಕ್ಕಾಗಿ ರಾಯ್ ಮೇಲೆ ಮತ್ತು ಅಂಪೈರ್ ವೈಡ್ ತೀರ್ಪು ನೀಡಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಆರ್ಚರ್ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ತಿಗೊಳಸದ್ದಕ್ಕೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಅವರಿಂದ ಪಂದ್ಯದ ಸಂಭಾವನೆಯ 20 ಶೇಕಡಾ ಮತ್ತು ಇತರ ಆಟಗಾರರಿಂದ 10 ಶೇಕಡಾ ಮೊತ್ತವನ್ನು ಪಡೆಯಲು ನಿರ್ಧರಿಸಲಾಗಿದೆ.
ಪಾಕ್ ಜಯಭೇರಿ: ಪಂದ್ಯದಲ್ಲಿ ಆತಿಥೇಯ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 14 ರನ್‌ಗಳಿಂದ ಗೆದ್ದಿತ್ತು. 349 ರನ್‌ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 9ಕ್ಕೆ 334 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.