ADVERTISEMENT

ಆಸ್ಟ್ರೇಲಿಯಾ ಎ ತಂಡಕ್ಕೆ 6 ವಿಕೆಟ್ ಜಯ; ಸೋತ ಪಂದ್ಯದಲ್ಲಿ ಮತ್ತೆ ಮಿಂಚಿದ ಜುರೆಲ್‌

ಪಿಟಿಐ
Published 9 ನವೆಂಬರ್ 2024, 14:45 IST
Last Updated 9 ನವೆಂಬರ್ 2024, 14:45 IST
<div class="paragraphs"><p>ಧ್ರುವ್ ಜುರೆಲ್</p></div>

ಧ್ರುವ್ ಜುರೆಲ್

   

ಮೆಲ್ಬರ್ನ್: ‌ಸತತ ಎರಡನೇ ಅರ್ಧ ಶತಕ ಬಾರಿಸುವ ಮೂಲಕ ವಿಕೆಟ್‌ ಕೀಪರ್ ಧ್ರುವ್ ಜುರೇಲ್ ಅವರು, ಇದೇ ತಿಂಗಳ 22ರಂದು ಆರಂಭವಾಗುವ ಪರ್ತ್‌ ಟೆಸ್ಟ್‌ ತಂಡದ ಕದ ತಟ್ಟಿದರು. ಆದರೆ ಭಾರತ ಎ ತಂಡ, ಎರಡನೇ ‘ಟೆಸ್ಟ್‌’ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಆಸ್ಟ್ರೇಲಿಯಾ ಎ ಎದುರು ಆರು ವಿಕೆಟ್‌ಗಳ ಸೋಲನುಭವಿಸಿತು.

ಭಾರತ ಎ ತಂಡ, ಎರಡು ಟೆಸ್ಟ್‌ಗಳ ಸರಣಿಯಲ್ಲಿ 0–2 ಸೋಲನುಭವಿಸಿತು. ಮ್ಯಾಕೆಯಲ್ಲಿ ನಡೆದ ಮೊದಲ ‘ಟೆಸ್ಟ್‌’ನಲ್ಲಿ ಭಾರತ ಏಳು ವಿಕೆಟ್‌ಗಳಿಂದ ಪರಾಭವಗೊಂಡಿತ್ತು.

ADVERTISEMENT

ಶುಕ್ರವಾರ 5 ವಿಕೆಟ್‌ಗೆ 73 ರನ್‌ಗಳಿಂದ ಆಟ ಮುಂದುವರಿಸಿದ ಭಾರತ 229 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಕೆಚ್ಚೆದೆಯಿಂದ ಆಡಿ 80 ರನ್ ಬಾರಿಸಿದ್ದ, ಜುರೆಲ್ ಎರಡನೇ ಸರದಿಯಲ್ಲಿ 122 ಎಸೆತಗಳನ್ನು ಎದುರಿಸಿ ತಾಳ್ಮೆಯ 68 ರನ್ ಹೊಡೆದರು.

ಮೇಲಿನ ಕ್ರಮಾಂಕ ಬೇಗ ಕುಸಿದರೆ, ಕೆಳ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ (38), ತನುಷ್ ಕೋಟ್ಯಾನ್ (44) ಮತ್ತು ಪ್ರಸಿದ್ಧ ಕೃಷ್ಣ (29) ಅವರು ಕೊಂಚ ಪ್ರತಿರೋಧ ಪ್ರದರ್ಶಿಸಿದರು. ಆಫ್‌ ಸ್ಪಿನ್ನರ್ ಕೋರಿ ರೊಸಿಸಿಯೋಲಿ ನಾಲ್ಕು ವಿಕೆಟ್‌ ಪಡೆದರೆ, ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ 49 ರನ್ನಿಗೆ 3 ವಿಕೆಟ್‌ ಕಿತ್ತರು.

ಗೆಲುವಿಗೆ ಬೇಕಾಗಿದ್ದ 168 ರನ್‌ಗಳ ಗುರಿಯನ್ನು ಆತಿಥೇಯರು 48 ಓವರುಗಲ್ಲಿ 4 ವಿಕೆಟ್‌ ನಷ್ಟದಲ್ಲಿ ತಲುಪಿದರು. ಪ್ರಸಿದ್ಧಕೃಷ್ಣ ಸತತ ಎಸೆತಗಳಲ್ಲಿ ಮಾರ್ಕಸ್‌ ಹ್ಯಾರಿಸ್‌ (0) ಮತ್ತು ಕ್ಯಾಮರಾನ್ ಬ್ರಾಂಕ್ರಾಫ್ಟ್‌ (0) ವಿಕೆಟ್‌ಗಳನ್ನು ಪಡೆದರು. ಆದರೆ ಸ್ಯಾಮ್‌ ಕಾನ್‌ಸ್ಟಾಸ (73, 128ಎ) ತಂಡದ ನೆರವಿಗೆ ನಿಂತರು. ಅವರಿಗೆ ನಾಯಕ ನಥಾನ್ ಮ್ಯಾಕ್‌ಸ್ವೀನಿ (25) ಮತ್ತು ಬ್ಯೂ ವೆಬ್‌ಸ್ಟರ್ (ವೌಟಾ್ದೇ 46) ಉಪಯುಕ್ತ ಬೆಂಬಲ ನೀಡಿ, ತಂಡದ ಗೆಲುವಿಗೆ ನೆರವಾದರು.

ಸ್ಕೋರುಗಳು

ಭಾರತ ಎ: 161 ಮತ್ತು 77.5 ಓವರುಗಳಲ್ಲಿ 229 (ಧ್ರುವ್‌ ಜುರೆಲ್‌ 68,

ಆಸ್ಟ್ರೇಲಿಯಾ ಎ: 223 ಮತ್ತು 47.5 ಓವರುಗಳಲ್ಲಿ 4 ವಿಕೆಟ್‌ಗೆ 169 (ನಥಾನ್‌ ಮ್ಯಾಕ್‌ಸ್ವೀನಿ 25, ಸ್ಯಾಮ್‌ ಕಾನ್‌ಸ್ಟಾಸ್‌ ಔಟಾಗದೇ 73, ಬ್ಯೂ ವೆಬ್‌ಸ್ಟರ್‌ ಔಟಾಗದೇ 46; ಪ್ರಸಿದ್ಧಕೃಷ್ಣ 37ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.