ADVERTISEMENT

ಸಿ.ಕೆ ನಾಯ್ಡು ಟ್ರೋಫಿ| ರೋಹಿತ್‌ ಮಿಂಚು: ಕರ್ನಾಟಕಕ್ಕೆ ಭರ್ಜರಿ ಗೆಲುವು

ಸಿ.ಕೆ.ನಾಯ್ಡು ಟ್ರೋಫಿ: ಹಿಮಾಚಲ ಪ್ರದೇಶಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 18:52 IST
Last Updated 25 ಜನವರಿ 2023, 18:52 IST
ಹಿಮಾಚಲ ಪ್ರದೇಶ ತಂಡದ ವಿರುದ್ಧ 5 ವಿಕೆಟ್‌ ಪಡೆದು ಕರ್ನಾಟಕ ಗೆಲ್ಲಲು ಕಾರಣರಾದ ಎ.ಸಿ.ರೋಹಿತ್ ಕುಮಾರ್‌ ಚೆಂಡನ್ನು ತೋರಿಸಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ
ಹಿಮಾಚಲ ಪ್ರದೇಶ ತಂಡದ ವಿರುದ್ಧ 5 ವಿಕೆಟ್‌ ಪಡೆದು ಕರ್ನಾಟಕ ಗೆಲ್ಲಲು ಕಾರಣರಾದ ಎ.ಸಿ.ರೋಹಿತ್ ಕುಮಾರ್‌ ಚೆಂಡನ್ನು ತೋರಿಸಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ರೋಹಿತ್‌ ಕುಮಾರ್‌ ಮಿಂಚಿನ ಬೌಲಿಂಗ್ ದಾಳಿಯ (37ಕ್ಕೆ 5) ಬಲದಿಂದ ಕರ್ನಾಟಕ ತಂಡದವರು ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 66 ರನ್‌ಗಳ ಭರ್ಜರಿ ಜಯ ಸಾಧಿಸಿದರು.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಬುಧವಾರ ಹಿಮಾಚಲ ತಂಡವು 62.4 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್‌ ಆಯಿತು.

ರೋಹಿತ್ ಮಿಂಚು: 251ರನ್‌ಗಳ ಗೆಲುವಿನ ಗುರಿಯೊಂದಿಗೆ ಅಂಗಳಕ್ಕಿಳಿದ ಹಿಮಾಚಲ ಪ್ರದೇಶ ತಂಡವು ಆರಂಭದಲ್ಲಿಯೇ ವೈಭವ್ ಶರ್ಮಾ (10), ಎ.ಎ.ವಾಲಿಯಾ (0) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ, ನಾಯಕ ಆರ್‌.ಐ.ಠಾಕೂರ್‌ (43) ಹಾಗೂ ಹಾಗೂ ಎಸ್‌.ಜಿ.ಅರೋರಾ (32) ಭರವಸೆ ಮೂಡಿಸಿದರು. ಈ ವೇಳೆ ದಾಳಿಗಿಳಿದ ಎ.ಸಿ.ರೋಹಿತ್ ಕುಮಾರ್‌ ಎದುರಾಳಿ ತಂಡದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದರು.

ADVERTISEMENT

ಮಧ್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರರಿಗೆ ಪೆವಿಲಿಯನ್‌ ದಾರಿ ತೋರಿದ ರೋಹಿತ್ 5 ವಿಕೆಟ್‌ ಪಡೆದರು. ರಾಜ್ಯ ತಂಡಕ್ಕೆ ಗೆಲುವಿನ ಸಿಹಿ ನೀಡಿದರು. ಮುಕುಲ್‌ ನೇಗಿ (29) ಹಾಗೂ ದೀಪಿಂದರ್‌ ಸಿಂಗ್‌ ರಾಣಾ (20) ಕೊಂಚ ಪ್ರತಿರೋಧ ತೋರಿದರಾದರೂ ರೋಹಿತ್‌ ಅವರ ಸ್ಪಿನ್ ಮೋಡಿಗೆ ಔಟಾದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌: ಕರ್ನಾಟಕ 166. ಹಿಮಾಚಲ ಪ್ರದೇಶ 214. ಎರಡನೇ ಇನಿಂಗ್ಸ್‌: ಕರ್ನಾಟಕ 89.4 ಓವರ್‌ಗಳಲ್ಲಿ 299 ಹಿಮಾಚಲ ಪ್ರದೇಶ: 62.4 ಓವರ್‌ಗಳಲ್ಲಿ 185 (ಆರ್‌.ಐ.ಠಾಕೂರ್ 43, ಎ.ಸಿ.ರೋಹಿತ್ ಕುಮಾರ್ 37ಕ್ಕೆ 5, ಶಶಿಕುಮಾರ್ 11ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.