ಬೆಂಗಳೂರು: ನಲವತ್ತು ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳನ್ನು ಗಳಿಸಿದ ಕರ್ನಾಟಕ ತಂಡವು ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 35 ರನ್‌ಗಳಿಂದ ಜಯಿಸಿತು.
ಬೆಳಿಗ್ಗೆ ಸುರಿದ ಮಳೆಯಿಂದಾಗಿ ಪಂದ್ಯವು ಎರಡು ಗಂಟೆ ತಡವಾಗಿ ಆರಂಭವಾಯಿತು. ಅದರಿಂದಾಗಿ ಪಂದ್ಯವನ್ನು 38 ಓವರ್‌ಗಳಿಗೆ ನಿಗದಿ ಪಡಿಸಲಾಯಿತು. ಟಾಸ್ ಗೆದ್ದ ಹಿಮಾಚಲಪ್ರದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶತಕದಂಚಿನಲ್ಲಿ ಎಡವಿದ ಆರ್. ಸಮರ್ಥ್ (98; 97ಎಸೆತ, 11ಬೌಂಡರಿ) ಉತ್ತಮ ಬ್ಯಾಟಿಂಗ್‌ನಿಂದಾಗಿ ಆತಿಥೇಯ ತಂಡವು 38 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 257 ರನ್ ಗಳಿಸಿತು.
ಗುರಿ ಬೆನ್ನತ್ತಿದ ಹಿಮಾಚಲ ಪ್ರದೇಶ ತಂಡವು 19.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 122 ರನ್ ಗಳಿಸಿದ ಸಂದರ್ಭದಲ್ಲಿ (ಸಂಜೆ 4ರ ಸುಮಾರು) ಮತ್ತೆ ಮಳೆ ಶುರುವಾಯಿತು. ಅದರಿಂದಾಗಿ 4.42ರವರೆಗೆ ಆಟ ಸ್ಥಗಿತವಾಯಿತು. ವಿ.ಜಯದೇವನ್ ನಿಯಮದ ಪ್ರಕಾರ ಗೆಲುವಿನ ಗುರಿಯನ್ನು 28 ಓವರ್‌ಗಳಲ್ಲಿ 198 ರನ್‌ಗಳಿಗೆ ನಿಗದಿ ಮಾಡಲಾಯಿತು. ಇದರಿಂದಾಗಿ ಆಟ ಮರಳಿ ಆರಂಭವಾದಾಗ 8.4 ಓವರ್‌ಗಳಲ್ಲಿ 76 ರನ್‌ಗಳನ್ನು ಗಳಿಸುವ ಸವಾಲು ತಂಡಕ್ಕೆ ಇತ್ತು.
ಆದರೆ ಮಧ್ಯಮವೇಗಿ ಟಿ. ಪ್ರದೀಪ್ (35ಕ್ಕೆ4) ಮತ್ತು ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ (25ಕ್ಕೆ4) ಅವರ ಚುರುಕಿನ ಬೌಲಿಂಗ್‌ನಿಂದಾಗಿ ಹಿಮಾಚಲ ಪ್ರದೇಶ ತಂಡವು ಕುಸಿಯಿತು.
ಈ ಟೂರ್ನಿಯಲ್ಲಿ ಕರ್ನಾಟಕಕ್ಕೆ ಇದು ಎರಡನೇ ಗೆಲುವು. ಒಟ್ಟು ಏಳು ಪಂದ್ಯಗಳನ್ನು ಆಡಿರುವ ತಂಡವು ಮೂರರಲ್ಲಿ ಸೋತಿತ್ತು. ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ‘ಹಾಲಿ ಚಾಂಪಿಯನ್’ ಕರ್ನಾಟಕ ತಂಡವು ಈಗಾಗಲೇ ನಾಕೌಟ್ ಹಂತದ ಪ್ರವೇಶದ ಹಾದಿಯಿಂದ ಹೊರಬಿದ್ದಿದೆ. ಸೋಮವಾರ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.
ಸ್ಕೋರ್
ಕರ್ನಾಟಕ
8ಕ್ಕೆ257 (38 ಓವರ್‌ಗಳು)
ಆರ್. ಸಮರ್ಥ್ ಸಿ ಮತ್ತು ಬಿ ರಿಷಿ ಧವನ್ 98
ಅಭಿಷೇಕ್ ರೆಡ್ಡಿ ಸಿ ಅಂಕುಶ್ ಬೇನ್ಸ್ ಬಿ ಪಂಕಜ್ ಜೈಸ್ವಾಲ್ 29
ಮೀರ್ ಕೌನೇನ್ ಅಬ್ಬಾಸ್ ರನ್‌ಔಟ್ (ಕುಮಾರ್) 06
ಮನೀಷ್ ಪಾಂಡೆ ಸಿ ಏಕಾಂತ್ ಸೇನ್ ಬಿ ಪ್ರಶಾಂತ್ ಚೋಪ್ರಾ 43
ಕೃಷ್ಣಪ್ಪ ಗೌತಮ್ ಸಿ ನಿಖಿಲ್ ಗಾಂಗ್ಟಾ ಬಿ ಪ್ರಶಾಂತ್ ಚೋಪ್ರಾ 03
ಅನಿರುದ್ಧ ಜೋಶಿ ಸಿ ನಿಖಿಲ್ ಗಾಂಗ್ಟಾ ಬಿ ಪಂಕಜ್ ಜೈಸ್ವಾಲ್ 42
ವಿನಯಕುಮಾರ್ ಸಿ ಮಯಂಕ್ ಡಾಗರ್ ಬಿ ಮೊಹಮ್ಮದ್ ಅಜರುದ್ದೀನ್ 02
ಬಿ.ಆರ್. ಶರತ್ ಸಿ ಮಯಂಕ್ ಡಾಗರ್ ಬಿ ಮೊಹಮ್ಮದ್ ಅಜರುದ್ದೀನ್ 06
ಶ್ರೇಯಸ್ ಗೋಪಾಲ್ ಔಟಾಗದೆ 13
ಟಿ. ಪ್ರದೀಪ್ ಔಟಾಗದೆ 01
ಇತರೆ: 14 (ಲೆಗ್‌ಬೈ 01, ವೈಡ್ 11, ನೋಬಾಲ್ 2)
ವಿಕೆಟ್ ಪತನ: 1–36 (ರೆಡ್ಡಿ; 5.6), 2–55 (ಅಬ್ಬಾಸ್; 8.1), 3–158 (ಮನೀಷ್;24.4), 4–165 (ಗೌತಮ್; 26.5), 5–207 (ಸಮರ್ಥ್; 32.5), 6–211 (ವಿನಯಕುಮಾರ್; 33.4), 7–219 (ಶರತ್; 34.2), 8–247 (ಅನಿರುದ್ಧ; 37.1).
ಬೌಲಿಂಗ್
ಮೊಹಮ್ಮದ್ ಅಜರುದ್ದೀನ್ 6–0–42–1, ಪಂಕಜ್ ಜೈಸ್ವಾಲ್ 7–0–55–1, ರಿಷಿ ಧವನ್ 8–0–57–3, ಮಯಂಕ್ ಡಾಗರ್ 7–0–47–0, ಗುರುವಿಂದರ್ ಸಿಂಗ್ 6–0–35–0, ಪ್ರಶಾಂತ್ ಚೋಪ್ರಾ 4–0–20–2
ಹಿಮಾಚಲ ಪ್ರದೇಶ
162 (25.2 ಓವರ್‌ಗಳಲ್ಲಿ)
ಅಂಕುಶ್ ಬೇನ್ಸ್ ಬಿ ಟಿ.ಪ್ರದೀಪ್ 26
ಪ್ರಶಾಂತ್ ಚೋಪ್ರಾ ಸಿ ಬಿ.ಆರ್. ಶರತ್ ಬಿ ಟಿ. ಪ್ರದೀಪ್ 67
ಅಮಿತ್ ಕುಮಾರ್ ಸಿ ಕೌನೇನ್ ಅಬ್ಬಾಸ್ ಬಿ ಟಿ.ಪ್ರದೀಪ್ 00
ನಿಖಿಲ್ ಗಾಂಗ್ಟಾ ಸಿ ಬಿ.ಆರ್. ಶರತ್ ಬಿ ಕೃಷ್ಣಪ್ಪ ಗೌತಮ್ 25
ಸುಮಿತ್ ವರ್ಮಾ ಸಿ ಶ್ರೇಯಸ್ ಗೋಪಾಲ್ ಬಿ ಟಿ. ಪ್ರದೀಪ್ 14
ಪಂಕಜ್ ಜೈಸ್ವಾಲ್ ಸಿ ಪ್ರಸಿದ್ಧ ಕೃಷ್ಣ ಬಿ ಕೃಷ್ಣಪ್ಪ ಗೌತಮ್ 00
ರಿಷಿ ಧವನ್ ಬಿ ಶ್ರೇಯಸ್ ಗೋಪಾಲ್ 02
ಏಕಾಂತ್ ಸೇನ್ ಸಿ ಮೀರ್ ಕೌನೇನ್ ಅಬ್ಬಾಸ್ ಬಿ ಕೃಷ್ಣಪ್ಪ ಗೌತಮ್ 02
ಮಯಂಕ್ ಡಾಗರ್ ಸಿ ಮನೀಷ್ ಪಾಂಡೆ ಬಿ ಅನಿರುದ್ಧ ಜೋಶಿ 15
ಗುರವಿಂದರ್ ಸಿಂಗ್ ಬಿ ಕೃಷ್ಣಪ್ಪ ಗೌತಮ್ 06
ಮೊಹಮ್ಮದ್ ಅಜರುದ್ದೀನ್ ಔಟಾಗದೆ 00
ಇತರೆ: 05 (ವೈಡ್ 3, ಬೈ 1, ಲೆಗ್‌ಬೈ 1)
ವಿಕೆಟ್ ಪತನ: 1–58 (ಅಂಕುಶ್; 8.3), 2–69 (ಅಮಿತ್; 10.2), 3–106 (ಚೋಪ್ರಾ;14.5), 4– 127 (ಸುಮಿತ್;19.5), 5–133 (ಪಂಕಜ್; 20.4), 6–134 (ನಿಖಿಲ್; 20.6), 7–138 (ರಿಷಿ; 21.6), 8– 138 (ಏಕಾಂತ್; 22.3), 9–146 (ಗುರುವಿಂದರ್; 24.2), 10–162 (ಮಯಂಕ್;25.3).
ಬೌಲಿಂಗ್
ಆರ್. ವಿನಯಕುಮಾರ್ 3–0–18–0, ಪ್ರಸಿದ್ಧ ಕೃಷ್ಣ 5–0–40–0, ಟಿ. ಪ್ರದೀಪ್ 6–0–35–4, ಕೃಷ್ಣಪ್ಪ ಗೌತಮ್ 5–0–26–4 (ವೈಡ್1), ಶ್ರೇಯಸ್ ಗೋಪಾಲ್ 6–30–33–1, ಅನಿರುದ್ಧ ಜೋಶಿ 0.3–0–8–1 (ವೈಡ್ 2)
ಫಲಿತಾಂಶ: ಕರ್ನಾಟಕ ತಂಡಕ್ಕೆ 35 ರನ್‌ಗಳ ಜಯ (ವಿಜೆಡಿ ಪದ್ಧತಿ) ಮತ್ತು 4 ಪಾಯಿಂಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.