ADVERTISEMENT

ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 15:51 IST
Last Updated 22 ಅಕ್ಟೋಬರ್ 2019, 15:51 IST
ರಾಧಾ ಯಾದವ್‌
ರಾಧಾ ಯಾದವ್‌   

ಬೆಂಗಳೂರು: ರಾಧಾ ಯಾದವ್‌ (11ಕ್ಕೆ3) ಮತ್ತು ಶಾಲಿನಿ ರಾಕೇಶ್‌ ಶರ್ಮಾ (14ಕ್ಕೆ2) ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ಕರ್ನಾಟಕ ತಂಡವು ಬಿಸಿಸಿಐ ಮಹಿಳಾ ಸೀನಿಯರ್‌ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಬರೋಡ ಎದುರಿನ ಪಂದ್ಯದಲ್ಲಿ 33ರನ್‌ಗಳಿಂದ ಸೋತಿದೆ.

ಮುಂಬೈನ ಸಚಿನ್‌ ತೆಂಡೂಲ್ಕರ್‌ ಜಿಮ್ಖಾನದಲ್ಲಿ ಮಂಗಳವಾರ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಓವರ್‌ಗಳನ್ನು 18ಕ್ಕೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಬರೋಡ 6 ವಿಕೆಟ್‌ ಕಳೆದುಕೊಂಡು 97ರನ್‌ ಸೇರಿಸಿತು.

ಸುಲಭ ಗುರಿ ಬೆನ್ನಟ್ಟಿದ ವೇದಾ ಕೃಷ್ಣಮೂರ್ತಿ ಸಾರಥ್ಯದ ಕರ್ನಾಟಕ ತಂಡವು 9 ವಿಕೆಟ್‌ಗೆ 64 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಬರೋಡ; 18 ಓವರ್‌ಗಳಲ್ಲಿ 6 ವಿಕೆಟ್‌ಗೆ 97 (ಜೆನಿತಾ ಜಾನ್‌ ಫರ್ನಾಂಡೀಸ್‌ 24, ರಾಧಾ ಯಾದವ್‌ 15, ಹೃತ್ವಿಶಾ ಕಮಲೇಶ್‌ ಪಟೇಲ್ ಔಟಾಗದೆ 27; ಎಂ.ಚಂದು 14ಕ್ಕೆ2, ಸಿಮ್ರನ್‌ ಹೆನ್ರಿ 7ಕ್ಕೆ1, ಸಹನಾ ಪವಾರ್‌ 16ಕ್ಕೆ1, ಆಕಾಂಕ್ಷಾ ಕೊಹ್ಲಿ 19ಕ್ಕೆ1).

ಕರ್ನಾಟಕ: 18 ಓವರ್‌ಗಳಲ್ಲಿ 9 ವಿಕೆಟ್‌ಗೆ 64 (ವೇದಾ ಕೃಷ್ಣಮೂರ್ತಿ 20, ರಕ್ಷಿತಾ ಕೃಷ್ಣಪ್ಪ 20; ರಾಧಾ ಯಾದವ್‌ 11ಕ್ಕೆ3, ತನ್ವೀರ್‌ ಇಸ್ಮಾಯಿಲ್‌ ಶೇಖ್‌ 19ಕ್ಕೆ1, ಶಾಲಿನಿ ರಾಕೇಶ್‌ ಶರ್ಮಾ 14ಕ್ಕೆ2).

ಫಲಿತಾಂಶ: ಬರೋಡ ತಂಡಕ್ಕೆ 33ರನ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.