ಬೆಂಗಳೂರು: ಜನವರಿಯಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಿಂಚಿದ್ದ ಅಭಿನವ್ ಮನೋಹರ್, ಬೌಲರ್ ವಿದ್ಯಾಧರ್ ಪಾಟೀಲ, ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ, ಕೆ.ವಿ. ಅನೀಶ್, ಅನೀಶ್ವರ್ ಗೌತಮ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಭಾರತ ಟೆಸ್ಟ್ ತಂಡದಲ್ಲಿ ಆಡುತ್ತಿರುವ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರನ್ನೂ ಆಯ್ಕೆ ಮಾಡಲಾಗಿದೆ. ಇದೇ 13ರಿಂದ ರಣಜಿ ಟೂರ್ನಿಯು ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಆಡುತ್ತಿರುವ ರಾಹುಲ್ ಮತ್ತು ಮಯಂಕ್ ರಣಜಿ ಟೂರ್ನಿಗೆ ಲಭ್ಯರಾಗುವುದಿಲ್ಲ. ದೇಶಿ ಟಿ20 ಮತ್ತು ಏಕದಿನ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ಮನೀಷ್ ಪಾಂಡೆ ರಣಜಿ ಟೂರ್ನಿಯಲ್ಲಿಯೂ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಇದೆ.
ತಂಡ: ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಡಿ. ನಿಶ್ಚಲ್, ಅಭಿನವ್ ಮನೋಹರ್, ಕೆ.ವಿ. ಸಿದ್ಧಾರ್ಥ್, ಕೆ.ವಿ. ಅನೀಶ್, ಅನೀಶ್ವರ್ ಗೌತಮ್, ವಿಶಾಲ್ ಒನತ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಪ್ರವೀಣ ದುಬೆ, ಕೆ.ಸಿ. ಕಾರ್ಯಪ್ಪ, ರಿತೇಶ್ ಭಟ್ಕಳ್, ಶುಭಾಂಗ್ ಹೆಗಡೆ, ಪ್ರಸಿದ್ಧ ಎಂ ಕೃಷ್ಣ, ರೋನಿತ್ ಮೋರೆ, ವೈಶಾಖ ವಿಜಯಕುಮಾರ್, ಎಂ. ವೆಂಕಟೇಶ್, ವಿದ್ಯಾಧರ್ ಪಾಟೀಲ, ಶರತ್ ಶ್ರೀನಿವಾಸ್, ಬಿ.ಆರ್. ಶರತ್, ಕೃತಿಕ್ ಕೃಷ್ಣ (ಮೂವರು ವಿಕೆಟ್‌ಕೀಪರ್), ಚಿನ್ಮಯ್ ಎನ್ ಅಮ್ಮಣಗಿ.
ಯರೇ ಕೆ ಗೌಡ (ಕೋಚ್), ಎಸ್. ಅರವಿಂದ್ (ಬೌಲಿಂಗ್ ಕೋಚ್), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್), ಜಾಬ ಪ್ರಭು (ಫಿಸಿಯೊ), ಎ.ಟಿ. ರಾಜಮಣಿ ಪ್ರಭು (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಸೋಮಸುಂದರ್ (ಮಸಾಜ್ ತಜ್ಞ), ಅನುತೋಷ್ ಪೋಳ್ (ಮ್ಯಾನೇಜರ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.