ADVERTISEMENT

ಗೌತಮ್ ಗಂಭೀರ್‌ಗೆ ನಡವಳಿಕೆ, ಪದಗಳ ಕೊರತೆ: ಮಾಧ್ಯಮಗಳಿಂದ ದೂರವಿಡಿ ಎಂದ ಮಂಜ್ರೇಕರ್

ಪಿಟಿಐ
Published 11 ನವೆಂಬರ್ 2024, 13:16 IST
Last Updated 11 ನವೆಂಬರ್ 2024, 13:16 IST
<div class="paragraphs"><p>ಸಂಜಯ್ ಮಂಜ್ರೇಕರ್ ಮತ್ತು&nbsp;ಗೌತಮ್ ಗಂಭೀರ್‌</p></div>

ಸಂಜಯ್ ಮಂಜ್ರೇಕರ್ ಮತ್ತು ಗೌತಮ್ ಗಂಭೀರ್‌

   

Credit: @sanjaymanjrekar (X) / PTI

ನವದೆಹಲಿ: ಮಾಧ್ಯಮದವರೊಂದಿಗೆ ಸಂವಾದ ನಡೆಸುವ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ ತಂಡದ ಮುಖ್ಯಕೋಚ್‌ ಗೌತಮ್‌ ಗಂಭೀರ್‌ ಅವರಿಗೆ ಸರಿಯಾದ ನಡವಳಿಕೆ ಮತ್ತು ಪದಗಳ ಕೊರತೆಯಿದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವ್ಯಂಗ್ಯವಾಡಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಕುರಿತಂತೆ ಗೌತಮ್‌ ಗಂಭೀರ್‌ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮಂಜ್ರೇಕರ್ ಅವರು ಗಂಭೀರ್‌ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಮುಂಬರುವ ಬಾರ್ಡರ್‌–ಗವಾಸ್ಕರ್‌ ಟ್ರೋಫಿ ಹಾಗೂ ಈಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ ಅವರ ಪ್ರದರ್ಶನದ ಬಗ್ಗೆ ಗಂಭೀರ್ ಮೊಂಡುತನದಿಂದ ಪ್ರತಿಕ್ರಿಯಿಸಿದ್ದಾರೆ ಎಂದು ಮಂಜ್ರೇಕರ್ ಗುಡುಗಿದ್ದಾರೆ.

‘ಗೌತಮ್‌ ಗಂಭೀರ್‌ ಅವರನ್ನು ಮಾಧ್ಯಮಗಳಿಂದ ದೂರವಿಡಿ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸುತ್ತೇನೆ. ಜತೆಗೆ, ಗಂಭೀರ್ ಅವರು ತೆರೆಮರೆಯಲ್ಲಿ ಕೆಲಸ ಮಾಡುವುದು ಉತ್ತಮ’ ಎಂದು ಮಂಜ್ರೇಕರ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಸಂವಾದ ನಡೆಸಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಸೂಕ್ತ ಎಂದು ಮಂಜ್ರೇಕರ್ ಸಲಹೆ ನೀಡಿದ್ದಾರೆ.

ಗಂಭೀರ್ ಅವರ ಯಾವ ಹೇಳಿಕೆ ಅಕ್ಷೇಪಾರ್ಹವಾಗಿತ್ತು ಎಂಬುದನ್ನು ಮಂಜ್ರೇಕರ್ ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ‘ಪಿಟಿಐ’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.