ADVERTISEMENT

ಖ್ವಾಜಾ 180*, ಗ್ರೀನ್ ಶತಕ; 2ನೇ ದಿನದ ಟೀ ವಿರಾಮಕ್ಕೆ ಆಸ್ಟ್ರೇಲಿಯಾ 409/7

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2023, 9:00 IST
Last Updated 10 ಮಾರ್ಚ್ 2023, 9:00 IST
   

ಅಹಮದಾಬಾದ್: ಭಾರತ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿದೆ.

ಎರಡನೇ ದಿನದ ಟೀ ವಿರಾಮದ ಹೊತ್ತಿಗೆ 146 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿದೆ.

ಎಡಗೈ ಆರಂಭಿಕ ಉಸ್ಮಾನ್ ಖ್ವಾಜಾ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾರೆ. 421 ಎಸೆತಗಳಲ್ಲಿ 21 ಬೌಂಡರಿಗಳ ನೆರವಿನಿಂದ 180 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಅವರಿಗೆ ನೇಥನ್ ಲಯನ್ (6*) ಸಾಥ್ ನೀಡುತ್ತಿದ್ದಾರೆ.

ADVERTISEMENT

ಗ್ರೀನ್ ಚೊಚ್ಚಲ ಶತಕ...
ಈ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ ದಾಖಲಿಸಿದರು. 170 ಎಸೆತಗಳನ್ನು ಎದುರಿಸಿದ ಗ್ರೀನ್ 114 ರನ್ (18 ಬೌಂಡರಿ) ಗಳಿಸಿ ಔಟ್ ಆದರು.

ಅಲ್ಲದೆ ಐದನೇ ವಿಕೆಟ್‌ಗೆ ಖ್ವಾಜಾ ಜೊತೆ 208 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಭಾರತದ ಪರ ರವಿಚಂದ್ರನ್ ಅಶ್ವಿನ್ ನಾಲ್ಕು, ಮೊಹಮ್ಮದ್ ಶಮಿ ಎರಡು ಮತ್ತು ರವೀಂದ್ರ ಜಡೇಜ ಒಂದು ವಿಕೆಟ್ ಗಳಿಸಿದ್ದಾರೆ.

ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 90 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.