ಗಾಲೆ (ಶ್ರೀಲಂಕಾ): ದಾಖಲೆ ವೀರ ಕಮಿಂದು ಮೆಂಡಿಸ್ ಅಜೇಯ 182 ರನ್ ಬಾರಿಸಿ ಎಂಟನೇ ಟೆಸ್ಟ್‌ನಲ್ಲೇ ಸಹಸ್ರ ರನ್‌ಗಳ ಮೈಲಿಗಲ್ಲು ದಾಟಿದರು. ಶ್ರೀಲಂಕಾ ಎರಡನೇ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಚಹ ವಿರಾಮ ಕಳೆದ ಒಂದು ಗಂಟೆ ನಂತರ 5 ವಿಕೆಟ್‌ಗೆ 602 ರನ್‌ಗಳ ಬೃಹತ್ ಮೊತ್ತ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ದಿನದಾಟ ಮುಗಿದಾಗ ಪ್ರವಾಸಿ ನ್ಯೂಜಿಲೆಂಡ್ 2 ವಿಕೆಟ್‌ಗೆ 22 ರನ್ ಗಳಿಸಿ ಸಂಕಷ್ಟದಲ್ಲಿದೆ. ಮೆಂಡಿಸ್‌ದ್ವಯರು (ಕಮಿಂದು ಮತ್ತು ಕುಸಲ್) ಮುರಿಯದ ಆರನೇ ವಿಕೆಟ್‌ಗೆ ಬರೋಬರಿ 200 ರನ್ ಸೇರಿಸಿದರು. ಇದು ಇನಿಂಗ್ಸ್‌ನಲ್ಲಿ ದಾಖಲಾದ ಮೂರನೇ ಶತಕದ ಜೊತೆಯಾಟ.
ಎಂಟನೇ ಟೆಸ್ಟ್‌ನ 13ನೇ ಇನಿಂಗ್ಸ್‌ನಲ್ಲಿ ಸಾವಿರ ರನ್ ದಾಟುವ ಮೂಲಕ ಕಮಿಂದು, ಆಸ್ಟ್ರೇಲಿಯಾದ ಮಹಾನ್ ಬ್ಯಾಟರ್ ಡಾನ್ ಬ್ರಾಡ್ಮನ್ ಅವರ ದಾಖಲೆ ಸರಿಗಟ್ಟಿದರು. ಕೇವಲ ಇಬ್ಬರು– ಇಂಗ್ಲೆಂಡ್‌ನ ಹರ್ಬರ್ಟ್ ಸಟ್‌ಕ್ಲಿಫ್ ಮತ್ತು ವೆಸ್ಟ್ ಇಂಡೀಸ್‌ನ ಎವರ್ಟನ್ ವೀಕ್ಸ್ ಅವರು 12 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ತಲುಪಿದ್ದಾರೆ. 25 ವರ್ಷ ವಯಸ್ಸಿನ ಕಮಿಂದು ಗಾಲೆ ನಗರದವರು.
ಕುಸಲ್ ಮೆಂಡಿಸ್ 106 ರನ್ (149ಎ, 4x6, 6x3) ಗಳಿಸಿ ಔಟಾಗದೇ ಉಳಿದರು. ಮೊದಲ ದಿನ ದಿನೇಶ್ ಚಾಂದಿಮಲ್ ಶತಕ (116) ಬಾರಿಸಿದ್ದರು.
250 ಎಸೆತಗಳನ್ನು ಎದುರಿಸಿದ ಕಮಿಂದು ಮತ್ತೆ ರನ್ ಹೊಳೆಹರಿಸಿದರು. ಅವರ ಅಜೇಯ ಆಟದಲ್ಲಿ 16 ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದವು.
ಆರಂಭ ಆಟಗಾರರಾದ ಟಾಮ್ ಲೇಥಮ್ (2) ಮತ್ತು ಡೆವಾನ್ ಕಾನ್ವೆ (9) ಅಲ್ಪಮೊತ್ತಕ್ಕೆ ಕ್ರಮವಾಗಿ
ಸ್ಕೋರುಗಳು: ಮೊದಲ ಇನಿಂಗ್ಸ್: ಶ್ರೀಲಂಕಾ: 163.4 ಓವರುಗಳಲ್ಲಿ 5 ವಿಕೆಟ್‌ಗೆ 602 ಡಿಕ್ಲೇರ್ (ದಿನೇಶ್ ಚಾಂದಿಮಲ್ 116, ಏಂಜೆಲೊ ಮ್ಯಾಥ್ಯೂಸ್ 88, ಕಮಿಂದು ಮೆಂಡಿಸ್ ಔಟಾಗದೇ 182, ಧನಂಜಯ ಡಿಸಿಲ್ವ 44, ಕುಸಲ್ ಮೆಂಡಿಸ್ ಔಟಾಗದೇ 106; ಗ್ಲೆನ್ ಫಿಲಿಪ್ಸ್ 141ಕ್ಕೆ3); ನ್ಯೂಜಿಲೆಂಡ್: 14 ಓವರುಗಳಲ್ಲಿ 2 ವಿಕೆಟ್‌ಗೆ 22.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.