ಶಾರ್ಜಾ:ಶಾರ್ಜಾ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತ ನೈಟ್‌ರೈಡರ್ಸ್‌ಗೆ 128 ರನ್‌ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಿಷಭ್ ಪಂತ್ ನೇತೃತ್ವದ ಡೆಲ್ಲಿನಿಗದಿತ20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು127ರನ್ ಗಳಿಸಲಷ್ಟೇ ಶಕ್ತವಾಯಿತು.
ಬಿಗುವಿನ ಬೌಲಿಂಗ್ ಸಂಘಟಿಸಿದಏಯಾನ್ ಮಾರ್ಗನ್ ಪಡೆದ ಬೌಲರ್‌ಗಳುಡೆಲ್ಲಿಯ ಬಲಿಷ್ಠ ಬ್ಯಾಟಿಂಗ್‌ಗೆಕಾಟಕೊಟ್ಟರು. ಈ ಬಾರಿಯ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿರುವ ಆಟಗಾರ ಎನಿಸಿರುವ ಶಿಖರ್ ಧವನ್ (24) ಅವರಿಗೆ ಲಾಕಿ ಫರ್ಗ್ಯೂಸನ್ ಪೆವಿಲಿಯನ್ ದಾರಿ ತೋರಿಸುವುದರೊಂದಿಗೆ ಕೆಕೆಆರ್ ವಿಕೆಟ್ ಬೇಟೆ ಆರಂಭಿಸಿತು.
ಬಳಿಕ ಬಂದ ಶ್ರೇಯಸ್ ಅಯ್ಯರ್ (1)ಹೆಚ್ಚು ಹೊತ್ತು ನಿಲ್ಲಲ್ಲಿಲ್ಲ. ಅವರು ನರೇನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಯಾದ ನಾಯಕ ರಿಷಭ್ ಪಂತ್ ಮತ್ತು ಸ್ಟೀವ್ ಸ್ಮಿತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ30 ರನ್ ಸೇರಿಸಿದರಾದರೂ,ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಕುಸಿದ ಮಧ್ಯಮ ಕ್ರಮಾಂಕ
ಗಾಯಾಳು ಪೃಥ್ವಿ ಶಾ ಬದಲು ಈ ಪಂದ್ಯದಲ್ಲಿ ಸ್ಥಾನ ಪಡೆದು ಇನಿಂಗ್ಸ್ ಆರಂಭಿಸಿದ ಸ್ಮಿತ್ ಉತ್ತಮವಾಗಿ ಬ್ಯಾಟ್ ಬೀಸಿದರು. 39 ರನ್‌ಗಳಿಸಿದ್ದ ಅವರು ಲಾಕಿ ಹಾಕಿದ ಇನಿಂಗ್ಸ್‌ನ13 ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ಡೆಲ್ಲಿಯ ಮಧ್ಯಮ ಕ್ರಮಾಂಕ ಕುಸಿಯಲಾರಂಭಿಸಿತು.
ನಂತರದ ಸತತ ಮೂರು ಓವರ್‌ಗಳಲ್ಲಿಶಿಮ್ರೋನ್ ಹೆಟ್ಮೆಯರ್ (4), ಲಲಿತ್ ಯಾದವ್ (0) ಮತ್ತು ಅಕ್ಷರ್ ಪಟೇಲ್ (0) ವಿಕೆಟ್ ಒಪ್ಪಿಸಿದ್ದು ಡೆಲ್ಲಿಗೆ ಹಿನ್ನಡೆಯಾಯಿತು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಗಟ್ಟಿಯಾಗಿ ನಿಂತು ಆಡಿದ ನಾಯಕ ಪಂತ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಕೊನೆಯವರೆಗೂ ಆಡಿದ ಅವರು, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನೊಂದಿಗೆ ತಂಡದ ಮೊತ್ತವನ್ನು120ರಗಡಿ ದಾಟಿಸಿದರು.
ಕೆಕೆಆರ್ ಪರ ಲಾಕಿ, ವೆಂಕಟ್ ಅಯ್ಯರ್ ಮತ್ತು ಸುನೀಲ್ ನರೇನ್ ತಲಾ2 ವಿಕೆಟ್ ಪಡೆದರು. ಟಿಮ್ ಸೌಥಿ ಒಂದು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.