ADVERTISEMENT

ODI: ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

49 ಶತಕ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2023, 13:03 IST
Last Updated 5 ನವೆಂಬರ್ 2023, 13:03 IST
<div class="paragraphs"><p>ವಿರಾಟ್,&nbsp;ಸಚಿನ್ </p></div>

ವಿರಾಟ್, ಸಚಿನ್

   

ICC

ಬೆಂಗಳೂರು: ಇಂದು ಕೋಲ್ಕತ್ತದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನ ಕೊಹ್ಲಿ ಮಯವಾಗಿತ್ತು. ICC World Cup ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಅವರು ಸೊಗಸಾದ ಪ್ರದರ್ಶನ ನೀಡಿ ಸೆಂಚುರಿ ಸಿಡಿಸಿದರು.

ADVERTISEMENT

ಅಭಿಮಾನಿಗಳು ಕಿಂಗ್ ಕೊಹ್ಲಿ ಅವರ ಆಟವನ್ನು ಕಣ್ತುಂಬಿಕೊಂಡು ಖುಷಿ ವ್ಯಕ್ತಪಡಿಸಿದರು.

121 ಬೌಲ್ ಆಡಿ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಒಟ್ಟು 49 ಶತಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ನಾಟ್ ಔಟ್ ಆಗದೇ ಉಳಿದಿದ್ದು ವಿಶೇಷವಾಗಿತ್ತು. ಇಂದು ಅವರ ಜನ್ಮದಿನವಿದ್ದಿದ್ದು ಇನ್ನೊಂದು ವಿಶೇಷ.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ (ODI) ಒಟ್ಟು 277 ಇನ್ನಿಂಗ್ಸ್ ಗಳನ್ನು ಆಡಿ ಈ ದಾಖಲೆ ನಿರ್ಮಿಸಿದರು. ಸಚಿನ್ ತೆಂಡೂಲ್ಕರ್ ಅವರು ಒಟ್ಟು 452 ಇನ್ನಿಂಗ್ಸ್ ಆಡಿ 49 ಶತಕ ಬಾರಿಸಿದ್ದಾರೆ. ಅತಿವೇಗವಾಗಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ ಕೀರ್ತಿ ವಿರಾಟ್ ಕೊಹ್ಲಿ ಅವರಿಗೆ ಸೇರಿತು.

ವಿರಾಟ್ ಅವರ ಸಾಧನೆ ಬಗ್ಗೆ ಸಚಿನ್ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನನ್ನ ದಾಖಲೆ ಮುರಿ ಎಂದು ಹೇಳಿದ್ದಾರೆ.

ODI ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರು

ವಿರಾಟ್ ಕೊಹ್ಲಿ (277 ಇನ್ನಿಂಗ್ಸ್) -49

ಸಚಿನ್ ತೆಂಡೂಲ್ಕರ್ (452) -49

ರೋಹಿತ್ ಶರ್ಮಾ (251) -31

ರಿಕಿ ಪಾಂಟಿಂಗ್ (365) -30

ಸನತ್ ಜಯಸೂರ್ಯ (433) -28.

ಇನ್ನು ಈ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿದೆ. ವಿರಾಟ್ ಕೊಹ್ಲಿ (101) ಹಾಗೂ ಶ್ರೇಯಸ್ ಅಯ್ಯರ್ 77 ಅವರ ಸೊಗಸಾದ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಉತ್ತರ ರನ್‌ ಕಲೆ ಹಾಕಲು ಕಾರಣವಾಯಿತು.

ಸ್ಪೋಟಕ ಆಟಕ್ಕೆ ಕೈ ಹಾಕಿದ ನಾಯಕ ರೋಹಿತ್ ಶರ್ಮಾ 40 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 23, ಕೆ.ಎಲ್ ರಾಹುಲ್ 8, ಸೂರ್ಯಕುಮಾರ್ ಯಾದವ್ 22 ಹಾಗೂ ರವೀಂದ್ರ ಜಡೇಜಾ 29 ರನ್ ಗಳಿಸಿದರು.

121 ಬೌಲ್ ಆಡಿ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಒಟ್ಟು 49 ಶತಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.