ಬೆಂಗಳೂರು: ಭಾರತ ಕ್ರಿಕೆಟ್ ತಂಡದ 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಇದರೊಂದಿಗೆ ಅವರು ಈ ಮಾದರಿಯಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಈವರೆಗೆ 291 ಏಕದಿನ ಪಂದ್ಯಗಳ 279 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ 50 ಶತಕ ಹಾಗೂ 71 ಅರ್ಧಶತಕ ಸಹಿತ 13,794 ರನ್ ಗಳಿಸಿದ್ದಾರೆ
1) ಶ್ರೀಲಂಕಾ ವಿರುದ್ಧ 107 ರನ್ (2009, ಕೋಲ್ಕತ, 4ನೇ ಕ್ರಮಾಂಕ)
2) ಬಾಂಗ್ಲಾದೇಶ ವಿರುದ್ಧ ಅಜೇಯ 102 ರನ್ ( 2010, ಡಾಕಾ, 3ನೇ ಕ್ರಮಾಂಕ)
3) ಆಸ್ಟ್ರೇಲಿಯಾ ಎದುರು 118 ರನ್ ( 2010, ವಿಶಾಖಪಟ್ಟಣ, 3ನೇ ಕ್ರಮಾಂಕ)
4) ನ್ಯೂಜಿಲೆಂಡ್ ಎದುರು 105 ರನ್ (2010, ಗುವಾಹಟಿ, 3ನೇ ಕ್ರಮಾಂಕ)
5) ಬಾಂಗ್ಲಾದೇಶ ಎದುರು ಅಜೇಯ 100 ರನ್ (2011, ಡಾಕಾ, 4ನೇ ಕ್ರಮಾಂಕ)
6) ಇಂಗ್ಲೆಂಡ್ ಎದುರು 107 ರನ್ (2011, ಕಾರ್ಡಿಫ್, 4ನೇ ಕ್ರಮಾಂಕ)
7) ಇಂಗ್ಲೆಂಡ್ ಎದುರು ಅಜೇಯ 112 ರನ್ (2011, ದೆಹಲಿ,4ನೇ ಕ್ರಮಾಂಕ)
8) ವೆಸ್ಟ್‌ಇಂಡೀಸ್ ಎದುರು 117 ರನ್ (2011, ವಿಶಾಖಪಟ್ಟಣ, 4ನೇ ಕ್ರಮಾಂಕ)
9) ಶ್ರೀಲಂಕಾ ವಿರುದ್ಧ ಅಜೇಯ 133 ರನ್ (2012, ಹೋಬರ್ಟ್, 4ನೇ ಕ್ರಮಾಂಕ)
10) ಶ್ರೀಲಂಕಾ ವಿರುದ್ಧ 108 ರನ್ (2012, ಡಾಕಾ, 4ನೇ ಕ್ರಮಾಂಕ)
11) ಪಾಕಿಸ್ತಾನ ಎದುರು 183 ರನ್ (2012 ಡಾಕಾ, 3ನೇ ಕ್ರಮಾಂಕ)
12) ಶ್ರೀಲಂಕಾ ಎದುರು 106 ರನ್ (2012; ಹಂಬಂಟೋಟ 3ನೇ ಕ್ರಮಾಂಕ)
13)ಶ್ರೀಲಂಕಾ ಎದುರು ಅಜೇಯ 128 ರನ್ (2012 ಕೊಲಂಬೊ, 3ನೇ ಕ್ರಮಾಂಕ)
14) ವೆಸ್ಟ್‌ಇಂಡೀಸ್ ವಿರುದ್ಧ 102 ರನ್ (2013 ಸ್ಪೇನ್, , 3ನೇ ಕ್ರಮಾಂಕ)
15) ಜಿಂಬಾಬ್ವೆ ಎದುರು 115 ರನ್ (2013 ಹರಾರೆ, 3ನೇ ಕ್ರಮಾಂಕ)
16) ಆಸ್ಟ್ರೇಲಿಯಾ ಎದುರು ಅಜೇಯ 100 ರನ್ (2013 ಜೈಪುರ, 3ನೇ ಕ್ರಮಾಂಕ)
17) ಆಸ್ಟ್ರೇಲಿಯಾ ಎದುರು ಅಜೇಯ 115ರನ್ (2013 ನಾಗ್ಪುರ, 3ನೇ ಕ್ರಮಾಂಕ)
18) ನ್ಯೂಜಿಲೆಂಡ್ ಎದುರು 123 ರನ್ (2014 ನೇಪಿಯರ್, 3ನೇ ಕ್ರಮಾಂಕ)
19) ಬಾಂಗ್ಲಾದೇಶ ವಿರುದ್ಧ 136 ರನ್ (2014 ಫತುಲ್ಲಾ, 3ನೇ ಕ್ರಮಾಂಕ)
20) ವೆಸ್ಟ್‌ಇಂಡೀಸ್ ವಿರುದ್ಧ 127 ರನ್ (2014 ಧರ್ಮಶಾಲಾ, 3ನೇ ಕ್ರಮಾಂಕ)
21) ಶ್ರೀಲಂಕಾ ಎದುರು ಅಜೇಯ 139 ರನ್ (2014 ರಾಂಚಿ, 4ನೇ ಕ್ರಮಾಂಕ)
22) ಪಾಕಿಸ್ತಾನ ಎದುರು 107 ರನ್ (2015 ಅಡಿಲೇಡ್, 3ನೇ ಕ್ರಮಾಂಕ)
23) ದಕ್ಷಿಣ ಆಫ್ರಿಕಾ ವಿರುದ್ಧ 138 ರನ್ (2015 ಚೆನ್ನೈ, 3ನೇ ಕ್ರಮಾಂಕ)
24) ಆಸ್ಟ್ರೇಲಿಯಾ ಎದುರು 117 ರನ್ (2016 ಮೆಲ್ಬೋರ್ನ್, 3ನೇ ಕ್ರಮಾಂಕ)
25) ಆಸ್ಟ್ರೇಲಿಯಾ ಎದುರು 106 ರನ್ (2016 ಕ್ಯಾನ್ಬೆರಾ, 3ನೇ ಕ್ರಮಾಂಕ)
26) ನ್ಯೂಜಿಲೆಂಡ್ ಎದುರು ಅಜೇಯ 154 ರನ್ (2016 ಮೊಹಾಲಿ, 3ನೇ ಕ್ರಮಾಂಕ)
27) ಇಂಗ್ಲೆಂಡ್ ಎದುರು 122 ರನ್ (2017 ಪುಣೆ, 3ನೇ ಕ್ರಮಾಂಕ)
28) ವೆಸ್ಟ್‌ಇಂಡೀಸ್ ವಿರುದ್ಧ ಅಜೇಯ 111 ರನ್ (2017 ಕಿಂಗ್‌ಸ್ಟನ್, 3ನೇ ಕ್ರಮಾಂಕ)
29) ಶ್ರೀಲಂಕಾ ಎದುರು 131 ರನ್ (2017 ಕೊಲಂಬೊ, 3ನೇ ಕ್ರಮಾಂಕ)
30) ಶ್ರೀಲಂಕಾ ಎದುರು ಅಜೇಯ 110 ರನ್ (2017 ಕೊಲಂಬೊ, 3ನೇ ಕ್ರಮಾಂಕ)
31) ನ್ಯೂಜಿಲೆಂಡ್ ಎದುರು 121 ರನ್ (2017 ಮುಂಬೈ, 3ನೇ ಕ್ರಮಾಂಕ)
32) ನ್ಯೂಜಿಲೆಂಡ್ ಎದುರು 113 ರನ್ (2017 ಕಾನ್ಪುರ, 3ನೇ ಕ್ರಮಾಂಕ)
33) ದಕ್ಷಿಣ ಆಫ್ರಿಕಾ ವಿರುದ್ಧ 112 ರನ್ (2018 ಡರ್ಬನ್, 3ನೇ ಕ್ರಮಾಂಕ)
34) ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 160 (2018 ಕೇಪ್‌ಟೌನ್, 3ನೇ ಕ್ರಮಾಂಕ)
35) ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 129 (2018 ಸೆಂಚುರಿಯನ್, 3ನೇ ಕ್ರಮಾಂಕ)
36) ವೆಸ್ಟ್‌ಇಂಡೀಸ್ ವಿರುದ್ಧ 140 ರನ್ (2018 ಗುವಾಹಟಿ, 3ನೇ ಕ್ರಮಾಂಕ)
37) ವೆಸ್ಟ್‌ಇಂಡೀಸ್ ಎದುರು ಅಜೇಯ 157 (2018 ವಿಶಾಖಪಟ್ಟಣ, 3ನೇ ಕ್ರಮಾಂಕ)
38) ವೆಸ್ಟ್‌ಇಂಡೀಸ್ ಎದುರು 107 ರನ್ (2018 ಪುಣೆ, 3ನೇ ಕ್ರಮಾಂಕ)
39) ಆಸ್ಟ್ರೇಲಿಯಾ ಎದುರು 104 ರನ್ (2019 ಅಡಿಲೇಡ್, 3ನೇ ಕ್ರಮಾಂಕ)
40) ಆಸ್ಟ್ರೇಲಿಯಾ ಎದುರು 116 ರನ್ (2019 ನಾಗ್ಪುರ, 3ನೇ ಕ್ರಮಾಂಕ)
41) ಆಸ್ಟ್ರೇಲಿಯಾ ಎದುರು 123 ರನ್ (2019 ರಾಂಚಿ, 3ನೇ ಕ್ರಮಾಂಕ)
42) ವೆಸ್ಟ್‌ಇಂಡೀಸ್ ಎದುರು 120 ರನ್ (2019 ಸ್ಪೇನ್, 3ನೇ ಕ್ರಮಾಂಕ)
43) ವೆಸ್ಟ್‌ಇಂಡೀಸ್ ಎದುರು ಅಜೇಯ 114 ರನ್ (2019 ಸ್ಪೇನ್, 3ನೇ ಕ್ರಮಾಂಕ)
44) ಬಾಂಗ್ಲಾದೇಶ ವಿರುದ್ಧ 113 ರನ್ (2022 ಚಿತ್ತಗಾಂಗ್, 3ನೇ ಕ್ರಮಾಂಕ)
45) ಶ್ರೀಲಂಕಾ ವಿರುದ್ಧ 113 ರನ್ (2023 ಗುವಾಹಟಿ, 3ನೇ ಕ್ರಮಾಂಕ)
46) ಶ್ರೀಲಂಕಾ ವಿರುದ್ಧ ಅಜೇಯ 166 ರನ್ (2023 ತಿರುವನಂತಪುರಂ, 3ನೇ ಕ್ರಮಾಂಕ)
47) ಪಾಕಿಸ್ತಾನ ಎದುರು ಅಜೇಯ 122 ರನ್ (2023 ಕೊಲಂಬೊ, 3ನೇ ಕ್ರಮಾಂಕ)
48) ಬಾಂಗ್ಲಾದೇಶ ಎದುರು ಅಜೇಯ 103 ರನ್ (2023 ಪುಣೆ, 3ನೇ ಕ್ರಮಾಂಕ)
49) ದಕ್ಷಿಣ ಆಫ್ರಿಕಾ ಎದುರು ಅಜೇಯ 101 ರನ್ (2023 ಕೋಲ್ಕತ್ತ, 3ನೇ ಕ್ರಮಾಂಕ)
50) ನ್ಯೂಜಿಲೆಂಡ್ ಎದುರು 117 ರನ್ (2023 ಮುಂಬೈ, 3ನೇ ಕ್ರಮಾಂಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.