ಬೆಂಗಳೂರು: ಹಿಂದಿನ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಪರ ಆಡಿದ್ದ ಆಲ್‌ರೌಂಡರ್ ಕೃಣಾಲ್ ಪಾಂಡ್ಯ 2025ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿದ್ದಾರೆ.
₹ 2 ಕೋಟಿ ಮೂಲ ಬೆಲೆ ಹೊಂದಿದ್ದ ಅವರನ್ನು ಆರ್‌ಸಿಬಿ ₹ 5.75 ಕೋಟಿ ನೀಡಿ ಖರೀದಿಸಿದೆ.
ಎಡಗೈ ಆಫ್‌ಸ್ಪಿನ್ನರ್ ಆಗಿರುವ ಅವರು, ಬ್ಯಾಟಿಂಗ್‌ನಲ್ಲಿಯೂ ಸ್ಫೋಟಕ ಆಟವಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ಖರೀದಿಸಲು ರಾಜಸ್ಥಾನ ರಾಯಲ್ಸ್ ಸಹ ಭಾರಿ ಪೈಪೋಟಿ ನಡೆಸಿತು. ಆದರೆ, ಅಂತಿಮವಾಗಿ ಆರ್‌ಸಿಬಿ ಮೇಲುಗೈ ಸಾಧಿಸಿತು.
ಬಯೋ ಬದಲಿಸಿದ ಪಾಂಡ್ಯ
ತಮ್ಮನ್ನು ಆರ್‌ಸಿಬಿ ಖರೀದಿಸಿರುವುದು ಖಚಿತವಾಗುತ್ತಿದ್ದಂತೆ ಪಾಂಡ್ಯ ಅವರು ತಮ್ಮ ಟ್ವಿಟರ್/ಎಕ್ಸ್ ಖಾತೆಯ ಬಯೊ ಬದಲಿಸಿಕೊಂಡಿದ್ದಾರೆ.
ತಮ್ಮನ್ನು 'ವೃತ್ತಿಪರ ಕ್ರಿಕೆಟಿಗ' ಎಂದು ಪರಿಚಯಿಸಿಕೊಂಡಿರುವ ಅವರು, 'ಟೀಂ ಇಂಡಿಯಾ, ಆರ್‌ಸಿಬಿ ಮತ್ತು ಬರೋಡಾ' ತಂಡಗಳನ್ನು ಪ್ರತಿನಿಧಿಸುವುದಾಗಿ ಬರೆದುಕೊಂಡಿದ್ದಾರೆ.
ಇದನ್ನು ಸ್ಕ್ರೀನ್‌ಶಾಟ್ ತೆಗೆದಿರುವ ಆರ್‌ಸಿಬಿ, ತನ್ನ ಎಕ್ಸ್ ಪುಟದಲ್ಲಿಯೂ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಸಾಧನೆ
ಐಪಿಎಲ್‌ನಲ್ಲಿ 127 ಪಂದ್ಯಗಳ 111 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯ, ಒಂದು ಅರ್ಧಶತಕ ಸಹಿತ 1,647 ರನ್ ಗಳಿಸಿದ್ದಾರೆ.
117 ಇನಿಂಗ್ಸ್‌ಗಳಲ್ಲಿ 7.37ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು, 76 ವಿಕೆಟ್ ಕಬಳಿಸಿದ್ದಾರೆ. ಇನಿಂಗ್ಸ್‌ವೊಂದರಲ್ಲಿ 11 ರನ್‌ಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.