ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆಯು ಎಲ್ಲ ವಿಭಾಗದ ಕೋಚ್‌ಗಳು ಮತ್ತು ಆಯ್ಕೆ ಸಮಿತಿಯನ್ನು ಬದಲಿಸದೇ ಇರಲು ನಿರ್ಧರಿಸಿದೆ. ಈಗಿರುವವರನ್ನೇ ಮುಂದಿನ ಕ್ರಿಕೆಟ್ ಋತುವಿಗೂ ಮುಂದುವರಿಸಲು ಶುಕ್ರವಾರ ನಡೆದ ಆಡಳಿತ ಸಮಿತಿಯಲ್ಲಿ ತೀರ್ಮಾನಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಪುರುಷರ ತಂಡದ ಆಯ್ಕೆ ಸಮಿತಿ: ಫಜಲ್ ಆರ್. ಖಲೀಲ್ (ಅಧ್ಯಕ್ಷ), ಬಿ.ಸಿದ್ದರಾಮು, ಆನಂದ ಪಿ.ಕಟ್ಟಿ, ರಮೇಶ್ ಹೆಜಮಾಡಿ (ಸದಸ್ಯರು); ಕೋಚ್: ಕೆ.ಯರೇಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ.
ಮಹಿಳೆಯರ ಆಯ್ಕೆ ಸಮಿತಿ: ಡಿ.ಜಯಶ್ರೀ (ಅಧ್ಯಕ್ಷೆ), ಮುಕ್ತ ಆರ್.ಅಳಗೇರಿ, ಲೀನಾ ಪ್ರಸಾದ್, ಪಿ.ಜೆ.ಹೇಮಲತ (ಸದಸ್ಯರು); ಕೋಚ್: ಮಮತ ಮಾಬೆನ್.
23 ವರ್ಷದೊಳಗಿನ ಬಾಲಕರ ಆಯ್ಕೆ ಸಮಿತಿ: ಫಜಲ್ ಆರ್.ಖಲೀಲ್ (ಅಧ್ಯಕ್ಷ), ಕೆ.ಎಲ್.ಅಶ್ವತ್ಥ್, ತೇಜಪಾಲ್ ಕೊಠಾರಿ, ರಘುತ್ತಮ್ ವನಲಿ (ಸದಸ್ಯರು), ಎಂ.ಎಸ್.ರವೀಂದ್ರ (ಮೈಸೂರು ವಲಯದ ಆಹ್ವಾನಿತರು); ಬ್ಯಾಟಿಂಗ್ ಕೋಚ್: ದೀಪಕ್ ಚೌಗುಲೆ, ಬೌಲಿಂಗ್ ಕೋಚ್: ಜಿ.ಚೈತ್ರ.
19 ವರ್ಷದೊಳಗಿನ ಬಾಲಕರ ಆಯ್ಕೆ ಸಮಿತಿ: ಆನಂದ ಪಿ.ಕಟ್ಟಿ (ಅಧ್ಯಕ್ಷ), ಎ.ಆರ್.ಮಹೇಶ್, ಸಿ.ರಾಘವೇಂದ್ರ, ಸಂತೋಷ್ ಕುಮಾರ್ ವಿ (ಸದಸ್ಯರು); ಬ್ಯಾಟಿಂಗ್ ಕೊಚ್: ನಿಖಿಲ್ ಹಲ್ದಿಪುರ್, ಬೌಲಿಂಗ್ ಕೋಚ್: ಎನ್.ಸಿ.ಅಯ್ಯಪ್ಪ.
16 ಮತ್ತು 14 ವರ್ಷದೊಳಗಿನ ಬಾಲಕರ ಆಯ್ಕೆ ಸಮಿತಿ: ಎಚ್.ಸುರೇಂದ್ರ (ಅಧ್ಯಕ್ಷ), ಎಂ.ವಿ.ಪ್ರಶಾಂತ್, ಎಚ್.ಚಂದ್ರಶೇಖರ್, ಎಸ್.ಪ್ರಕಾಶ್ (ಸದಸ್ಯರು), ಕೆ.ಶಶಿಧರ್ (ತುಮಕೂರು ವಲಯದಿಂದ ಆಹ್ವಾನಿತರು); ಕೋಚ್‌ಗಳು: ಸಿ.ರಘು ಮತ್ತು ರಾಜಶೇಖರ್ ಶಾನಬಾಲ್
ಜೂನಿಯರ್ ಬಾಲಕಿಯರ ಆಯ್ಕೆ ಸಮಿತಿ: ಚಂದ್ರಿಕ ಶ್ರೀಧರ್ (ಅಧ್ಯಕ್ಷೆ), ಆಶ್ರಯಿ ರಾಮ್, ಅನುರಾಧ ಪ್ರಸಾದ್, ನಿವೇದಿತ ರೇಷ್ಮೆ (ಸದಸ್ಯರು); ಕೋಚ್ ಲಕ್ಷ್ಮಿ ಹರಿಹರನ್.
ಎಲ್ಲ ವಿಭಾಗದ ಆಯ್ಕೆ ಸಮಿತಿಗೆ ಕಾರ್ಯದರ್ಶಿ ಮತ್ತು ಸಂಯೋಜಕರು: ಸಂತೋಷ್ ಮೆನನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.