ಬೆಂಗಳೂರು: ಪ್ರವೀಣ್ ದುಬೆ ಅವರ ಭರ್ಜರಿ ಬೌಲಿಂಗ್ (14ಕ್ಕೆ 4) ಹಾಗೂ ಕರುಣ್ ನಾಯರ್ ಅವರ ಅರ್ಧಶತಕದ (53, 37 ಎಸೆತ, 8 ಬೌಂಡರಿ, 1 ಸಿಕ್ಸರ್) ಬಲದಿಂದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡವು ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ 8 ವಿಕೆಟ್‌ಗಳಿಂದ ಜವಾನ್ಸ್ ಕ್ರಿಕೆಟ್ ಕ್ಲಬ್ ತಂಡವನ್ನು ಸೋಲಿಸಿತು.
ಸಂಕ್ಷಿಪ್ತ ಸ್ಕೋರುಗಳು: ಜವಾನ್ಸ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 125 (ಮಿಲಿಂದ್ ರಮೇಶ್ 39, ಅನೀಶ್ವರ್ ಗೌತಮ್ 32; ಜೆ.ಸುಚಿತ್ 19ಕ್ಕೆ 2, ಪ್ರವೀಣ್ ದುಬೆ 14ಕ್ಕೆ 4). ವಲ್ಚರ್ಸ್ ಕ್ರಿಕೆಟ್ ಕ್ಲಬ್: 17.3 ಓವರ್‌ಗಳಲ್ಲಿ 2 ವಿಕೆಟ್‌ಗೆ 126 (ಶ್ರೀಜಿತ್ ಕೆ.ಎಲ್. 20, ಕರುಣ್ ನಾಯರ್ 53, ಸ್ಮರಣ್ ಆರ್. ಔಟಾಗದೆ 32). ಫಲಿತಾಂಶ: ವಲ್ಚರ್ಸ್ ಕ್ರಿಕೆಟ್ ತಂಡಕ್ಕೆ 8 ವಿಕೆಟ್‌ಗಳ ಗೆಲುವು.
ಜವಾಹರ್ ಸ್ಪೋರ್ಟ್ಸ್ ಕ್ಲಬ್ (2): 20 ಓವರ್‌ಗಳಲ್ಲಿ 9 ವಿಕೆಟ್‌ಗೆ 129 (ಸೂರ್ಯ ಶ್ರೀನಿವಾಸ್ 23, ಪರೀಕ್ಷಿತ್ ಒಕ್ಕುಂದ 34, ರೋಹಿತ್ ಸುಂದರ್ 25; ನವೀನ್ ಪಾಟೀಲ್ 13ಕ್ಕೆ 2, ಕುಶಲ್ ರಮೇಶ್ 15ಕ್ಕೆ 2, ಅರುಣ್.ಕೆ 19ಕ್ಕೆ 3). ದ ಬೆಂಗಳೂರು ಕ್ರಿಕೆಟರ್ಸ್: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 130 (ಆರ್ಯನ್ ಶ್ರೀವಾಸ್ತವ್ 37, ಅರುಣ್ ಕೆ. 25, ಕೆ.ಬಿ.ಶ್ರೀನಿವಾಸ್ ಔಟಾಗದೆ 27, ಅನಿರುದ್ಧ ರಾವ್ 23ಕ್ಕೆ 3). ಫಲಿತಾಂಶ: ದ ಬೆಂಗಳೂರು ಕ್ರಿಕೆಟರ್ಸ್‌ಗೆ 4 ವಿಕೆಟ್‌ಗಳ ಜಯ.
ಸರ್ ಸಯ್ಯದ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 145 (ನಿಕಿನ್ ಜೋಸ್ ಎಸ್.ಜೆ. 49, ಕ್ರಾಂತಿಕುಮಾರ್ 43; ತಾಹ ಖಾನ್ 32ಕ್ಕೆ 2, ಶ್ರೀಕರ್ ಗಣಿಗ 23ಕ್ಕೆ 3). ಜವಾಹರ್ ಸ್ಪೋರ್ಟ್ಸ್ ಕ್ಲಬ್ (1): 20 ಓವರ್‌ಗಳಲ್ಲಿ 9 ವಿಕೆಟ್‌ಗೆ 110 (ರಾಜ್ ಕುಮಾರ್ ಎಸ್.ಎಂ. 38; ಎಂ. ಕ್ರಾಂತಿಕುಮಾರ್ 20ಕ್ಕೆ 2, ಎಸ್.ಸೂರಜ್ 33ಕ್ಕೆ 2, ರಾಹುಲ್ ಮೆನನ್ 16ಕ್ಕೆ 2). ಫಲಿತಾಂಶ: ಸರ್ ಸಯ್ಯದ್ ಕ್ರಿಕೆಟರ್ಸ್‌ಗೆ 35 ರನ್‌ಗಳ ಜಯ.
ಜುಪಿಟರ್ಸ್ ಕ್ರಿಕೆಟರ್ಸ್ ಅಸೋಸಿಯೇಷನ್: 16.2 ಓವರ್‌ಗಳಲ್ಲಿ 74 ಆಲೌಟ್ (ಗೌರವ್ ಧಿಮಾನ್ 18ಕ್ಕೆ 2, ಸುಲೇಮಾನ್ ತಿಳಗುಳ 12ಕ್ಕೆ 3, ಕಿಶೋರ್ 18ಕ್ಕೆ 2). ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್ (ಚಿಂತಾಮಣಿ): 6.1 ಓವರ್‌ಗಳಲ್ಲಿ 2 ವಿಕೆಟ್‌ಗೆ 77 (ರಜತ್ ಹೆಗ್ಡೆ 21, ಸರ್ಫರಾಜ್ ಎಂ. ಇಲಾಬಾದ್ ಔಟಾಗದೆ 33). ಫಲಿತಾಂಶ: ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್‌ಗೆ 8 ವಿಕೆಟ್‌ಗಳ ಜಯ.
ಸೋಷಿಯಲ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 195 (ಆದರ್ಶ್ ಪ್ರಜ್ವಲ್ ಎಸ್. 37, ಸ್ಟಾಲಿನ್ ಹೂವರ್ 68, ಅಕ್ಷಯ್ ಬಲ್ಲಾಳ್ 21, ಅವಿನಾಶ್ ಡಿ. 27; ವಿದ್ಯಾಧರ್ ಪಾಟೀಲ್ 38ಕ್ಕೆ 2, ಅವಿಷೇಕ್ 31ಕ್ಕೆ 2). ವಿಜಯಾ ಕ್ರಿಕೆಟ್ ಕ್ಲಬ್: 17.2 ಓವರ್‌ಗಳಲ್ಲಿ 105 ಆಲೌಟ್ (ಶಿವರಾಜ್ ಎಸ್. 39; ಪೃಥ್ವಿರಾಜ್ 14ಕ್ಕೆ 3, ರಿತೇಶ್ ಭಟ್ಕಳ 15ಕ್ಕೆ 3). ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ 90 ರನ್‌ಗಳ ಗೆಲುವು.
ಕೆಂಬ್ರಿಡ್ಜ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 187 (ದೇವದತ್ತ ಪಡಿಕ್ಕಲ್ 42, ಅಭಿನವ್ ಮನೋಹರ್ 79; ಗೌತಮ್ ರೆಡ್ಡಿ 34ಕ್ಕೆ 2, ಸಂತೋಷ್ 32ಕ್ಕೆ 3). ದೂರವಾಣಿ ಕ್ರಿಕೆಟರ್ಸ್ (1): 20 ಓವರ್‌ಗಳಲ್ಲಿ 8 ವಿಕೆಟ್‌ಗೆ 120 (ಗೌತಮ್ ರೆಡ್ಡಿ 27; ಶುಭಾಂಗ್ ಹೆಗ್ಡೆ 36ಕ್ಕೆ 2, ಅಧೋಕ್ಷ 15ಕ್ಕೆ 3). ಫಲಿತಾಂಶ: ಕೆಂಬ್ರಿಡ್ಜ್ ಕ್ರಿಕೆಟ್ ಕ್ಲಬ್‌ಗೆ 67 ರನ್‌ಗಳ ಜಯ.
ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 144 (ಶರತ್ ಬಿ.ಆರ್. 48, ಸಮರ್ಥ್ ಊಟಿ 33; ಆದಿತ್ಯ ಗೋಯಲ್ 33ಕ್ಕೆ 3). ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (1): 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 145 (ಲಿಯಾನ್ ಖಾನ್ 55, ವೆಂಕಟೇಶ್ ಎಂ. 33, ಜೀಶನ್ ಅಲಿ ಔಟಾಗದೆ 26). ಫಲಿತಾಂಶ: ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ಗೆ (1) ಏಳು ವಿಕೆಟ್ ಜಯ.
ಫ್ರೆಂಡ್ಸ್ ಯೂನಿಯನ್ ಸಿಸಿ (1): 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121 (ಮಿಥುನ್ ಭಟ್ 20, ಶಶೀಂದ್ರ ಕೆ. 37, ರಿಷಿ ಬೋಪಣ್ಣ ಔಟಾಗದೆ 24; ನವೀನ್ ಎಂ.ಜಿ. 18ಕ್ಕೆ 3, ಕೆ.ಗೌತಮ್ 30ಕ್ಕೆ 2). ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 118 (ಸಮರ್ಥ್ ಆರ್. 37, ಸಿದ್ಧಾರ್ಥ್ 36, ಯಶ್ ಶಾನ್‌ಭಾಗ್ 13ಕ್ಕೆ 2, ಲಿಖಿತ್ ಬನ್ನೂರ್ 23ಕ್ಕೆ 2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ಸಿಸಿಗೆ(1) ಮೂರು ರನ್‌ಗಳ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.