ADVERTISEMENT

ಕ್ರಿಕೆಟ್‌: ಎಜಿಒ, ಡಿಟಿಡಿಸಿ ತಂಡಗಳಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 19:30 IST
Last Updated 12 ಮಾರ್ಚ್ 2020, 19:30 IST

ಬೆಂಗಳೂರು: ರಾಘವೇಂದ್ರ ಅವರ ಪರಿಣಾಮಕಾರಿ ಬೌಲಿಂಗ್ ಮತ್ತು ರಾಜ್‌ಕುಮಾರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಎಜಿಒ ರಿಕ್ರಿಯೇಷನ್ ಕ್ಲಬ್ ತಂಡ ಕೆಎಸ್‌ಸಿಎ ಎರಡನೇ ಗುಂಪು, ಮೊದಲ ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ತಂಡದ ಎದುರು ಗುರುವಾರ ನಡೆದ ಪಂದ್ಯವನ್ನು ಎಜಿಒ ಆರು ವಿಕೆಟ್‌ಗಳಿಂದ ಗೆದ್ದುಕೊಂಡಿತು. ನಿತಿನ್ ಭಿಲ್ಲೆ ಮತ್ತು ಮಲಿಕ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನೈರುತ್ಯ ರೈಲ್ವೆ 237 ರನ್ ಗಳಿಸಿತು. ಗುರಿ ಬೆನ್ನತ್ತಿದ ಎಜಿಒ39ನೇ ಓವರ್‌ನಲ್ಲೇ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್: ನೈರುತ್ಯ ರೈಲ್ವೆ: 50 ಓವರ್‌ಗಳಲ್ಲಿ 9ಕ್ಕೆ 237 (ನಿತಿನ್ ಭಿಲ್ಲೆ 67, ಮಲಿಕ್ 72, ಪ್ರಥಮೇಶ್ 33; ರಾಘವೇಂದ್ರ 42ಕ್ಕೆ2, ರಾಜ್‌ಕುಮಾರ್ 34ಕ್ಕೆ4); ಎಜಿಒ ರಿಕ್ರಿಯೇಷನ್ ಕ್ಲಬ್: 38.3 ಓವರ್‌ಗಳಲ್ಲಿ 4ಕ್ಕೆ 241 (ಅರ್ಜುನ್ ಹೊಯ್ಸಳ 45, ರಾಘವೇಂದ್ರ ಡಿ 97, ಕಿರಣ್ ಎ.ಎಂ 56; ಅಪೂರ್ಣ ಕಾಳೆ ಅಜೇಯ 29;ಮಲಿಕ್ 73ಕ್ಕೆ3). ಫಲಿತಾಂಶ: ಎಜಿಒ ರಿಕ್ರಿಯೇಷನ್ ಕ್ಲಬ್‌ಗೆ 6 ವಿಕೆಟ್‌ಗಳ ಜಯ.

ADVERTISEMENT

ರಿತೇಶ್, ಪ್ರವೀಣ್ ಆಲ್‌ರೌಂಡ್ ಆಟ: ಮತ್ತೊಂದು ಪಂದ್ಯದಲ್ಲಿ ರೈಲು ಗಾಲಿ ಕಾರ್ಖಾನೆ ಕ್ರೀಡಾ ಸಂಸ್ಥೆಯ ತಂಡವನ್ನು ಡಿಟಿಡಿಸಿ ಸ್ಪೋರ್ಟ್ಸ್ ಕ್ಲಬ್‌ ಐದು ವಿಕೆಟ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರ್: ರೈಲು ಗಾಲಿ ಕಾರ್ಖಾನೆ: 45.3 ಓವರ್‌ಗಳಲ್ಲಿ 182 (ಮಂಜೇಶ್‌ ರೆಡ್ಡಿ 28, ಮಂಜುನಾಥ್ ಎಸ್‌.ಪಿ 33, ಪ್ರಾಣೇಶ್ ದೇಸಾಯಿ 33, ದರ್ಶನ್ ಎಂ.ಬಿ 29; ಅಭಿಷೇಕ್ ಶೆಟ್ಟಿ 23ಕ್ಕೆ2, ರಿತೇಶ್ ಭಟ್ಕಳ 48ಕ್ಕೆ3, ಪ್ರವೀಣ್ ದುಬೆ 40ಕ್ಕೆ2); ಡಿಟಿಡಿಸಿ ಸ್ಪೋರ್ಟ್ಸ್ ಕ್ಲಬ್: 37.3 ಓವರ್‌ಗಳಲ್ಲಿ 5ಕ್ಕೆ 184 (ಅಭಿಷೇಕ್ ರೆಡ್ಡಿ 38, ನಿಹಾಲ್ ಉಳ್ಳಾಲ್ 47, ಪ್ರವೀಣ್‌ ದುಬೆ ಅಜೇಯ 33, ರಿತೇಶ್ ಭಟ್ಕಳ್ ಅಜೇಯ 37; ಪ್ರಾಣೇಶ್ ದೇಸಾಯಿ 41ಕ್ಕೆ3). ಫಲಿತಾಂಶ:ಡಿಟಿಡಿಸಿ ಸ್ಪೋರ್ಟ್ಸ್ ಕ್ಲಬ್‌ಗೆ ಐದು ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.