ಬೆಂಗಳೂರು: ರೋಹನ್ ಕದಂ (ಔಟಾಗದೆ 107) ಮತ್ತು ಅಭಿನವ್ ಮನೋಹರ್ (ಔಟಾಗದೆ 50) ಅವರ ಅಮೋಘ ಜೊತೆಯಾಟದ ನೆರವಿನಿಂದ ಜವಾನ್ಸ್ ಕ್ಲಬ್ ತಂಡ ನಗರದ ಹೊರವಲಯದಲ್ಲಿರುವ ಆಲೂರಿನ ಒಂದನೇ ಮೈದಾನದಲ್ಲಿ ಮಂಗಳವಾರ ನಡೆದ ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆರಾನ್ಸ್ ಕ್ಲಬ್ ಎದುರು 10 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ.
ಸಂಕ್ಷಿಪ್ತ ಸ್ಕೋರ್: ಹೆರಾನ್ಸ್ ಕ್ಲಬ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 165 (ಮೀರ್ ಕೌನೈನ್ ಅಬ್ಬಾಸ್ 85). ಜವಾನ್ಸ್ ಕ್ಲಬ್: 12.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 166 (ರೋಹನ್ ಕದಂ ಔಟಾಗದೆ 107, ಅಭಿನವ್ ಮನೋಹರ್ ಔಟಾಗದೆ 50). ಫಲಿತಾಂಶ: ಜವಾನ್ಸ್ ಕ್ಲಬ್‌ಗೆ 10 ವಿಕೆಟ್ ಗೆಲುವು.
ಸರ್ ಸೈಯದ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 143 (ಸೌರಭ್ ಮತ್ತೂರ್ 33; ರುಚಿರ್ ಜೋಶಿ 23ಕ್ಕೆ4). ವಲ್ಚರ್ಸ್ ಕ್ಲಬ್: 18.2 ಓವರ್‌ಗಳಲ್ಲಿ 117 (ಮನೋಜ್ ಭಾಂಡಗೆ 14ಕ್ಕೆ2, ವರುಣ್ ಪಂಡಿತ್ 14ಕ್ಕೆ2). ಫಲಿತಾಂಶ: ಸೈಯದ್ ಕ್ರಿಕೆಟರ್ಸ್‌ಗೆ 26ರನ್ ಗೆಲುವು.
ಫ್ರೆಂಡ್ಸ್ ಯೂನಿಯನ್ ಕ್ಲಬ್ (1): 20 ಓವರ್‌ಗಳಲ್ಲಿ 4 ವಿಕೆಟ್‌ಗೆ 147 (ಮಿಥುನ್ ಭಟ್ 67; ಸಿ.ಎ.ಕಾರ್ತಿಕ್ 30ಕ್ಕೆ2). ಸ್ವಸ್ತಿಕ್ ಯೂನಿಯನ್ ಕ್ಲಬ್ (1): 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 150 (ಆರ್.ಸಮರ್ಥ್ 28, ಅಭಿಷೇಕ್ ರೆಡ್ಡಿ 27, ನಾಗ ಭರತ್ 35; ಬಿ.ಯು.ಶಿವಕುಮಾರ್ 26ಕ್ಕೆ3). ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 2 ವಿಕೆಟ್ ಗೆಲುವು.
ವಿಜಯ ಕ್ಲಬ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 89 (ವೈಶಾಖ್ ವಿಜಯಕುಮಾರ್ 21ಕ್ಕೆ2, ಪೃಥ್ವಿರಾಜ್ 12ಕ್ಕೆ3). ಸೋಷಿಯಲ್ ಕ್ರಿಕೆಟರ್ಸ್: 11.2 ಓವರ್‌ಗಳಲ್ಲಿ 3 ವಿಕೆಟ್‌ಗೆ 90 (ಸ್ಟಾಲಿನ್ ಹೂವರ್ 34; ಮುರಳಿ ಕೃಷ್ಣಾ 21ಕ್ಕೆ2). ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ 7 ವಿಕೆಟ್ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.