ಕೊಲಂಬೊ: ವೇಗದ ಬೌಲರ್ ಲಸಿತ್ ಮಾಲಿಂಗ ಅವರಿಗೆ ವಿದಾಯ ಪಂದ್ಯದಲ್ಲಿ ಶ್ರೀಲಂಕಾ ತಂಡದವರು ಗೆಲುವಿನ ಉಡುಗೊರೆ ನೀಡಿದರು. ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಆತಿಥೇಯರು 91 ರನ್‌ಗಳಿಂದ ಮಣಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಕುಶಾಲ್ ಪೆರೇರಾ (111; 99 ಎಸೆತ, 1 ಸಿಕ್ಸರ್, 17 ಬೌಂಡರಿ) ಅವರ ಶತಕದ ಬಲದಿಂದ 314 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಬಾಂಗ್ಲಾ 42ನೇ ಓವರ್‌ನಲ್ಲಿ 223ಕ್ಕೆ ಆಲೌಟಾಯಿತು. ಮಾಲಿಂಗ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 8ಕ್ಕೆ 314 (ಧಿಮುತ್ ಕರುಣಾರತ್ನೆ 34, ಕುಶಾಲ್ ಪೆರೇರಾ 111, ಕುಶಾಲ್ ಮೆಂಡಿಸ್ 43, ಏಂಜೆಲೊ ಮ್ಯಾಥ್ಯೂಸ್ 48, ಶಫೀವುಲ್ ಇಸ್ಲಾಂ 62ಕ್ಕೆ3, ಮುಸ್ತಫಿಜುರ್ ರಹಿಮಾನ್ 75ಕ್ಕೆ2);
ಬಾಂಗ್ಲಾದೇಶ: 41.4 ಓವರ್‌ಗಳಲ್ಲಿ 223 (ಮುಷ್ಫಿಕುರ್ ರಹೀಮ್ 67, ಶಬ್ಬೀರ್ ರಹಿಮಾನ್ 60; ಲಸಿತ್ ಮಾಲಿಂಗ 38ಕ್ಕೆ3, ನುವಾನ್ ಪ್ರದೀಪ್ 51ಕ್ಕೆ3, ಧನಂಜಯ ಡಿ ಸಿಲ್ವಾ 49ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 91 ರನ್‌ಗಳ ಜಯ. ಪಂದ್ಯಶ್ರೇಷ್ಠ: ಕುಶಾಲ್ ಪೆರೇರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.