ADVERTISEMENT

ಟೆಕ್ಸಾಸ್‌ನಲ್ಲಿ ಎಲ್‌ಐಟಿ T20 

​ಪ್ರಜಾವಾಣಿ ವಾರ್ತೆ
Published 23 ಮೇ 2024, 22:30 IST
Last Updated 23 ಮೇ 2024, 22:30 IST
ಪಾರ್ಥಿವ್ ಪಟೇಲ್
ಪಾರ್ಥಿವ್ ಪಟೇಲ್   

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ,  ಇಂಗ್ಲೆಂಡ್‌ನ ಆಫ್‌ಸ್ಪಿನ್ನರ್ ಗ್ರೆಮ್ ಸ್ವಾನ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಅವರು ಆಗಸ್ಟ್ 15 ರಿಂದ 29 ರವರೆಗೆ ಟೆಕ್ಸಾಸ್‌ನಲ್ಲಿ ನಡೆಯಲಿರುವ ಏಳು ತಂಡಗಳ ಲೆಜೆಂಡ್ಸ್ ಇಂಟರ್‌ಕಾಂಟಿನೆಂಟಲ್  (ಎಲ್‌ಐಟಿ) 20 ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. 

ಅಮೆರಿಕ ಮೂಲದ ಬ್ರೋಸಿಡ್ ಸ್ಪೋರ್ಟ್ಸ್ ಎಲ್‌ಎಲ್‌ಸಿ ಗುರುವಾರ ಲೀ, ಸ್ವಾನ್, ದಿಲ್ಶನ್ ಮತ್ತು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ಅವರ ಉಪಸ್ಥಿತಿಯಲ್ಲಿ ಚೊಚ್ಚಲ ಆವೃತ್ತಿ ಪ್ರಾರಂಭಿಸುವುದಾಗಿ ಘೋಷಿಸಿತು.

ಟೂರ್ನಿಯಲ್ಲಿ ಏಳು ತಂಡಗಳು - ಇಂಡೋ ಕಿಂಗ್ಸ್, ಏಷ್ಯನ್ ಅವೆಂಜರ್ಸ್, ಯುರೋ ರೇಂಜರ್ಸ್, ಅಮೇರಿಕನ್ ಮೇವರಿಕ್ಸ್, ಟ್ರಾನ್ಸ್-ಟಾಸ್ಮನ್ ಟೈಟಾನ್ಸ್, ಆಫ್ರಿಕನ್ ಲಯನ್ಸ್ ಮತ್ತು ಕೆರಿಬಿಯನ್ ವೈಕಿಂಗ್ಸ್ ಚೊಚ್ಚಲ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.

ADVERTISEMENT

ಎಲ್‌ಐಟಿ–20 ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಲೀಗ್ ಹಂತದ ಕೊನೆಯಲ್ಲಿ ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಮುನ್ನಡೆಯುತ್ತವೆ. ಒಟ್ಟು 24 ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಆಗಸ್ಟ್ 27 ರಂದು ನಡೆಯಲಿದ್ದು, ನಂತರ ಆಗಸ್ಟ್ 28 ರಂದು ಫೈನಲ್‌ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.