ನವದೆಹಲಿ: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (ಎಲ್‌ಎಲ್‌ಸಿ) ಎರಡನೇ ಋತುವಿನ ಟೂರ್ನಿ ಸೆ.16 ರಂದು ನಡೆಯಲಿರುವ ವಿಶೇಷ ಪಂದ್ಯದೊಂದಿಗೆ ಆರಂಭವಾಗಲಿದೆ.
ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜೈಂಟ್ಸ್ ಎದುರಾಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
‘ಇಡೀ ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಭ್ರಮದಲ್ಲಿದ್ದು, 75ನೇ ವರ್ಷಾಚರಣೆ ಭಾಗವಾಗಿ ಈ ವಿಶೇಷ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಎಲ್‌ಎಲ್‌ಸಿ ಆಯುಕ್ತ ರವಿಶಾಸ್ತ್ರಿ ಹೇಳಿದ್ದಾರೆ.
ಇಂಡಿಯಾ ಮಹಾರಾಜಾಸ್ ತಂಡವನ್ನು ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಮುನ್ನಡೆಸಲಿದ್ದರೆ, ವರ್ಲ್ಡ್ ಜೈಂಟ್ಸ್ ತಂಡದ ನೇತೃತ್ವವನ್ನು ಇಂಗ್ಲೆಂಡ್‌ನ ಮಾಜಿ ಆಟಗಾರ ಎಯೊನ್ ಮಾರ್ಗನ್ ವಹಿಸಲಿದ್ದಾರೆ.
ಸೆ.16 ರಿಂದ ಅ.8ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ನಾಲ್ಕು ತಂಡಗಳು ಪಾಲ್ಗೊಳ್ಳಲಿವೆ. 22 ದಿನಗಳಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.