ಸಾರ್ಬ್ರಕೆನ್, ಜರ್ಮನಿ (ಪಿಟಿಐ): ಭಾರತದ ಉದಯೋನ್ಮುಖ ಆಟಗಾರ್ತಿ ಮಾಳವಿಕಾ ಬನ್ಸೋದ್ ಅವರು ಇಲ್ಲಿ ನಡೆಯುತ್ತಿರುವ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಮಾಳವಿಕಾ ಅವರು 21–15, 21–17ರಿಂದ ತಮಗಿಂತ ಮೇಲಿನ ರ್ಯಾಂಕ್ನಲ್ಲಿರುವ ಆಟಗಾರ್ತಿ, ವಿಯೆಟ್ನಾಮ್ನ ಥೆಡ್ ಯವೈ ಲಿನ್ ಎನ್ಗುಯಾನ್ ಅವರನ್ನು ಸೋಲಿಸಿದರು.
ಸೆಮಿಫೈನ್ನಲ್ಲಿ ಮಾಳವಿಕಾ ಅವರು ಎಂಟನೇ ಶ್ರೇಯಾಂಕದ ಡೆನ್ಮಾರ್ಕಿನ ಆಟಗಾರ್ತಿ ಜೂಲಿ ದಾವಲ್ ಜ್ಯಾಕೊಬಸನ್ ಅವರನ್ನು ಎದುರಿಸುವರು.
ಭಾರತದ ಮತ್ತೊಬ್ಬ ಸ್ಪರ್ಧಿ ಆಯುಷ್ ಶೆಟ್ಟಿ 21-18, 21-18ರಿಂದ ಫಿನ್ಲೆಂಡ್ನ ಕ್ಯಾಲಿ ಕೊಲ್ಜೋನ್ ವಿರುದ್ಧ ಗೆದ್ದರು. ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು. ಆಯುಷ್ ಅವರು ಫ್ರಾನ್ಸ್ನ ಕ್ರಿಸ್ಟೊ ಪೊಪೊವ್ ಅವರನ್ನು ಎದುರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.