ADVERTISEMENT

ಸೈಯ್ಯದ್ ಮುಷ್ತಾಕ್ ಅಲಿ ಕ್ರಿಕೆಟ್‌: ಯುವರಾಜ್ ಆಟಕ್ಕೆ ಕರ್ನಾಟಕ ಸುಸ್ತು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:45 IST
Last Updated 23 ನವೆಂಬರ್ 2024, 15:45 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಇಂದೋರ್: ಕರ್ನಾಟಕ ತಂಡ, ಸೈಯ್ಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ಎದುರು ಶನಿವಾರ ಆರು ರನ್‌ಗಳ ಸೋಲನುಭವಿಸಿತು. ವಿಶೇಷ ಎಂದರೆ ಈ ಬಾರಿ ಸೋಲಿಗೆ ಕಾರಣ ಬೌಲರ್‌ಗಳು ಕೈಕೊಟ್ಟಿದ್ದು.

ಆರು ಮಂದಿ ಬೌಲರ್‌ಗಳು 215 ರನ್ ಬಿಟ್ಟುಕೊಟ್ಟರು. ಉತ್ತರಾಖಂಡ 20 ಓವರುಗಳಲ್ಲಿ 6 ವಿಕೆಟ್‌ ಕಳೆದುಕೊಂಡ ಇಷ್ಟು ದೊಡ್ಡ ಮೊತ್ತ ಗಳಿಸಿತು. ಆರಂಭ ಆಟಗಾರ ಯುವರಾಜ್ ಚೌಧರಿ ಹೆಚ್ಚು ಆಕ್ರಮಣಕಾರಿಯಾಗಿದ್ದು, 60 ಎಸೆತಗಳಲ್ಲಿ 123 ರನ್ ಸಿಡಿಸಿದರು. ಇದರಲ್ಲಿ 9 ಬೌಂಡರಿಗಳ ಜೊತೆ 11 ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ಆದಿತ್ಯ ತಾರೆ 23 ಎಸೆತಗಳಲ್ಲಿ ಗಳಿಸಿದ ಬಿರುಸಿನ ಅಜೇಯ 42 ರನ್‌ಗಳು ಉಪಯುಕ್ತವಾದವು.

ADVERTISEMENT

ಪ್ರಮುಖ ಬೌಲರ್‌ಗಳಾದ ವಿ.ಕೌಶಿಕ್‌, ವಿಜಯಕುಮಾರ್ ವೈಶಾಖ್ ಮತ್ತು ಶುಭಾಂಗ್ ಹೆಗ್ಡೆ ಒಟ್ಟುಗೂಡಿ 10 ಓವರುಗಳಲ್ಲಿ 137 ರನ್ ತೆತ್ತರು.

ಕರ್ನಾಟಕ ಪರ ಆರಂಭ ಆಟಗಾರ ಕೆ.ಎಲ್‌.ಶ್ರೀಜಿತ್ 40 ಎಸೆತಗಳಲ್ಲಿ ಅಜೇಯ 72 ರನ್ (4x5, 6x5) ಬಾರಿಸಿ ಹೋರಾಟ ನಡೆಸಿದರೂ ಅದು ಫಲ ನೀಡಲಿಲ್ಲ. ಅವರೊಡನೆ ಕೊನೆಯಲ್ಲಿ ಶುಭಾಂಗ್ ಹೆಗ್ಡೆ 4 ಸಿಕ್ಸರ್‌ಗಳಿದ್ದ 36 ರನ್ ಗಳಿಸಿದರೂ ತಂಡ ಒಂದು ಎಸೆತ ಇರುವಂತೆ 209 ರನ್ನಿಗೆ ಆಲೌಟಾಯಿತು. ಒಂದು ಹಂತದಲ್ಲಿ 2 ವಿಕೆಟ್‌ಗೆ 109 ರನ್ ಗಳಿಸಿದ್ದ ಕರ್ನಾಟಕ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್ ಹಿಮಾಂಶು ಬಿಷ್ಠ್‌ (33ಕ್ಕೆ3) ಮಧ್ಯಮ ಕ್ರಮಾಂಕ ಮುರಿದರೆ, ನಾಯಕ, ವೇಗದ ಬೌಲರ್ ಆಕಾಶ್ ಮಧ್ವಾಲ್ (48ಕ್ಕೆ3) ಕೊನೆಯ 3 ವಿಕೆಟ್ ಪಡೆದರು.

ಸ್ಕೋರುಗಳು:

ಉತ್ತರಾಖಂಡ: 20 ಓವರುಗಳಲ್ಲಿ 5 ವಿಕೆಟ್‌ಗೆ 215 (ಯುವರಾಜ್ ಚೌಧರಿ 123, ಆರ್‌.ಸಮರ್ಥ್‌ 21, ಆದಿತ್ಯ ತಾರೆ ಔಟಾಗದೇ 42, ಕೆ.ಕೌಶಿಕ್ 43ಕ್ಕೆ2, ಶ್ರೇಯಸ್ ಗೋಪಾಲ್ 30ಕ್ಕೆ2); ಕರ್ನಾಟಕ: 19.5 ಓವರುಗಳಲ್ಲಿ 209 (ಎಲ್‌.ಆರ್.ಚೇತನ್ 31, ಮಯಂಕ್ ಅಗರವಾಲ್ 48, ಕೆ.ಎಲ್‌.ಶ್ರೀಜಿತ್ ಔಟಾಗದೇ 72, ಶುಭಾಂಗ್ ಹೆಗ್ಡೆ 36; ಆಕಾಶ್ ಮಧ್ವಾಲ್ 48ಕ್ಕೆ3, ಹಿಮಾಂಶು ಬಿಷ್ಠ್ 33ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.