ADVERTISEMENT

AUS vs IND: ಶತಕ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದ ಮಾರ್ನಸ್ ಲಾಬೂಶೇನ್

ಏಜೆನ್ಸೀಸ್
Published 15 ಜನವರಿ 2021, 8:23 IST
Last Updated 15 ಜನವರಿ 2021, 8:23 IST
ಮಾರ್ನಸ್ ಲಾಬೂಶೇನ್ ಆಕರ್ಷಕ ಬ್ಯಾಟಿಂಗ್
ಮಾರ್ನಸ್ ಲಾಬೂಶೇನ್ ಆಕರ್ಷಕ ಬ್ಯಾಟಿಂಗ್   

ಬ್ರಿಸ್ಬೇನ್: ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದ್ದು, ಮಾರ್ನಸ್ ಲಾಬೂಶೇನ್ ತಂಡಕ್ಕೆ ಆಸರೆಯಾಗಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತ ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಗಾಯಕ್ಕೆ ತುತ್ತಾಗಿ ಬಳಲುತ್ತಿರುವುದು ಕೂಡ ಸಮಸ್ಯೆಯಾಗಿದೆ.

ಮಾರ್ನಸ್ ಲಾಬೂಶೇನ್ ಆಕರ್ಷಕ ಬ್ಯಾಟಿಂಗ್

ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಮಾರ್ನಸ್ ಲಾಬೂಶೇನ್, ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಪಂದ್ಯದ ಆರಂಭದಲ್ಲೇ ನಾಲ್ಕು ರನ್ ಗಳಿಕೆಗೆ ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡಿತ್ತು. ಅದಾದ ಬೆನ್ನಲ್ಲೇ ಎರಡನೇ ಓವರ್‌ನಲ್ಲಿ ಲಾಬೂಶೇನ್ ಕ್ರೀಸ್‌ಗೆ ಇಳಿದಿದ್ದು, ಸೆಂಚುರಿ ಹೊಡೆದಿದ್ದಾರೆ. ಇದು ಲಾಬೂಶೇನ್‌ಗೆ 18ನೇ ಟೆಸ್ಟ್ ಪಂದ್ಯವಾಗಿದ್ದು, ಈವರೆಗೆ ಐದು ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಆರಂಭದಲ್ಲಿ ನಿಧಾನಗತಿಯ ಆಟ ಪ್ರದರ್ಶಿಸಿದ ಲಾಬೂಶೇನ್, ಬಳಿಕ 195 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 100 ರನ್ ಗಳಿಸುವಲ್ಲಿ ಯಶಸ್ವಿಯಾದರು. 108 ರನ್ ಗಳಿಸಿ ಆಟವಾಡುತ್ತಿದ್ದ ಅವರು ಕೊನೆಗೆ ಟಿ. ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು.

ಮೊದಲ ದಿನದ ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.