ಹರಾರೆ: ಗ್ಲೆನ್ ಮ್ಯಾಕ್ಸ್‌ವೆಲ್ (56; 38ಎ, 1ಬೌಂ, 5ಸಿ) ಅವರ ಅಬ್ಬರದ ಬ್ಯಾಟಿಂಗ್ ಮತ್ತು ಆ್ಯಂಡ್ರ್ಯೂ ಟೈ (28ಕ್ಕೆ3) ಮಿಂಚಿನ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151ರನ್ ದಾಖಲಿಸಿತು. ಸವಾಲಿನ ಗುರಿಯನ್ನು ಆ್ಯರನ್ ಫಿಂಚ್ ಸಾರಥ್ಯದ ಕಾಂಗರೂಗಳ ನಾಡಿನ ತಂಡ 19.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಮುಟ್ಟಿತು.
ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ, 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 (ಸೊಲೊಮನ್ ಮೀರ್ 63, ಹ್ಯಾಮಿಲ್ಟನ್ ಮಸಕಜಾ 13, ತರಿಸೈ ಮುಸಕಾಂಡ 12, ಪೀಟರ್ ಮೂರ್ 30; ಬಿಲ್ಲಿ ಸ್ಟಾನ್‌ಲೇಕ್ 21ಕ್ಕೆ2, ಜೇ ರಿಚರ್ಡ್‌ಸನ್ 32ಕ್ಕೆ2, ಆ್ಯಂಡ್ರ್ಯೂ ಟೈ 28ಕ್ಕೆ3, ಜೇಕ್ ವಿಲ್ಡರ್‌ಮಥ್ 16ಕ್ಕೆ1).
ಆಸ್ಟ್ರೇಲಿಯಾ: 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 154 (ಅಲೆಕ್ಸ್ ಕೇರಿ 16, ಟ್ರಾವಿಸ್ ಹೆಡ್ 48, ಗ್ಲೆನ್ ಮ್ಯಾಕ್ಸ್‌ವೆಲ್ 56, ಮಾರ್ಕಸ್ ಸ್ಟೊಯಿನಿಸ್ ಔಟಾಗದೆ 12; ವೆಲ್ಲಿಂಗ್ಟನ್ ಮಸಕಜಾ 32ಕ್ಕೆ1, ಬ್ಲೆಸ್ಸಿಂಗ್ ಮುಜರಬಾನಿ 21ಕ್ಕೆ3, ಡೊನಾಲ್ಡ್ ತಿರಿಪಾನೊ 27ಕ್ಕೆ1).
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 5 ವಿಕೆಟ್ ಜಯ. ಪಂದ್ಯಶ್ರೇಷ್ಠ: ಆ್ಯಂಡ್ರ್ಯೂ ಟೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.