ಬರ್ಮಿಂಗಂ: ಕಾಲುಬೆರಳಿನ ಗಾಯಗದಿಂದಾಗಿ ಭಾರತ ತಂಡದ ಆಲ್‌ರೌಂಡರ್ ವಿಜಯಶಂಕರ್ ವಿಶ್ವಕಪ್‌ನಿಂದ ಉಳಿದ ಪಂದ್ಯಗಳಿಂದ ಹೊರಬಿದಿದ್ದಾರೆ. ಆವರ ಬದಲು ಕರ್ನಾಟಕದ ಆರಂಭ ಆಟಗಾರ ಮಯಾಂಕ್ ಅಗರವಾಲ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
28 ವರ್ಷದ ಅಗರವಾಲ್, ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಏಕದಿನ ತಂಡದಲ್ಲಿ ಇನ್ನೂ ಆಡಿಲ್ಲ.
‘ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಮುನ್ನ ಪ್ರಾಕ್ಟೀಸ್ ವೇಳೆ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ವಿಜಯ್ ಕಾಲಿನ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಅವರ ನೋವು ಕಡಿಮೆಯಾಗಿಲ್ಲ. ಹೀಗಾಗಿ ಅವರು ಸ್ವದೇಶಕ್ಕೆ ಮರಳಲಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
‘ವಿಜಯ ಶಂಕರ್ ಬದಲಿಗೆ ಭಾರತ ತಂಡದ ಚಿಂತಕರ ಚಾವಡಿಯು, ಮಯಾಂಕ್ ಅವರನ್ನು ಕೇಳುವ ಸಾಧ್ಯತೆಯಿದೆ. ಅವರು ಆರಂಭ ಆಟಗಾರರಾಗಿರುವುದರಿಂದ, ಕೆ.ಎಲ್.ರಾಹುಲ್ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆಡಿಸಲು ಅವಕಾಶವಾಗಲಿದೆ. ಒಂದೊಮ್ಮೆ ರಿಷಭ್ ಪಂತ್ ಮುಂದಿನ ಎರಡು ಪಂದ್ಯಗಳಲ್ಲಿ ವಿಫಲರಾದರೆ ಆ ಸ್ಥಾನದಲ್ಲಿ ರಾಹುಲ್ ಆಡುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.
‘ಅಗರವಾಲ್ ಅವರ ಸೇರ್ಪಡೆಗೆ ಐಸಿಸಿಯ ಟೂರ್ನಿ ತಾಂತ್ರಿಕ ಸಮಿತಿ ಸಮ್ಮತಿ ಸೂಚಿಸುವ ಸಾಧ್ಯತೆಯಿದೆ. ಅವರು ಬರ್ಮಿಂಗಂಗೆ ಬಂದಿಳಿದು, ಅಲ್ಲಿಂದ ಲೀಡ್ಸ್‌ಗೆ ಪ್ರಯಾಣಿಸುವರು.
ವಿಶ್ವಕಪ್‌ನಲ್ಲಿ ತನ್ನ ಏಳನೇ ಪಂದ್ಯವನ್ನು ಇಂಗ್ಲೆಂಡ್‌ಗೆ 31 ರನ್‌ಗಳಿಂದ ಸೋತ ಭಾರತ, ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಮಂಗಳವಾರ ಬರ್ಮಿಂಗಂನಲ್ಲೇ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.