ADVERTISEMENT

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2023, 11:40 IST
Last Updated 20 ನವೆಂಬರ್ 2023, 11:40 IST
<div class="paragraphs"><p>ಡ್ರೆಸ್ಸಿಂಗ್‌ ರೂಮ್‌ ಭಾರತೀಯ ಕ್ರಿಕೆಟ್‌ ಆಟಗಾರರನ್ನು ಭೇಟಿಯಾದ ಪ್ರಧಾನಿ ಮೋದಿ</p></div>

ಡ್ರೆಸ್ಸಿಂಗ್‌ ರೂಮ್‌ ಭಾರತೀಯ ಕ್ರಿಕೆಟ್‌ ಆಟಗಾರರನ್ನು ಭೇಟಿಯಾದ ಪ್ರಧಾನಿ ಮೋದಿ

   

ಚಿತ್ರ ಕೃಪೆ: @imjadeja

ನವದೆಹಲಿ: ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಸೋಲುಂಡಿದೆ. ಮೊಟೇರಾದ ನರೇಂದ್ರ ಮೋದಿ ಕ್ರಿಡಾಂಗಣದಕ್ಕೆ ಪಂದ್ಯ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತೆರಳಿದ್ದರು.

ADVERTISEMENT

ಈ ವೇಳೆ ಪಂದ್ಯ ಸೋತ ಭಾರತ ತಂಡಕ್ಕೆ ಸಾಂತ್ವಾನ ಹೇಳಲು ಡ್ರೆಸ್ಸಿಂಗ್‌ ರೂಮ್‌ಗೆ ಭೇಟಿ ನೀಡಿದ್ದರು. ಈ ಕುರಿತಾದ ಫೋಟೊಗಳನ್ನು ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‌

ಮೋದಿ ಅವರನ್ನು ಭೇಟಿಯಾದ ಫೋಟೊ ಹಂಚಿಕೊಂಡ ಮೊಹಮ್ಮದ್‌ ಶಮಿ, ‘ದುರದೃಷ್ಟಕ್ಕೆ ನಿನ್ನೆಯ ದಿನ ನಮ್ಮದಲ್ಲಾಗಿತ್ತು. ಆದರೂ ನಮಗೆ ಪ್ರೋತ್ಸಾಹ ನೀಡಿದ ಎಲ್ಲ ಭಾರತೀಯರಿಗೆ, ವಿಶೇಷವಾಗಿ ಪಂದ್ಯ ವೀಕ್ಷಿಸಿ ಬಳಿಕ ಡ್ರೆಸ್ಸಿಂಗ್‌ ರೂಮ್‌ಗೆ ಬಂದು ನಮ್ಮಲ್ಲಿನ ಶಕ್ತಿಯನ್ನು ಹುರಿದುಂಬಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು’ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಈ ಬಗ್ಗೆ ರವೀಂದ್ರ ಜಡೇಜಾ ಅವರು, ‘ಅತ್ಯುತ್ತಮ ಆಟದಲ್ಲಿ ಕಂಡ ಸೋಲು ನಮಗೂ ಬೇಸರ ತರಿಸಿದೆ, ಆದರೆ ನಿಮ್ಮ ಪ್ರೋತ್ಸಾಹ ಸದಾ ಇರಲಿ ಎಂದಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್‌ ರೂಮ್‌ಗೆ ಬಂದು ನಮ್ಮಲ್ಲಿ ಧೈರ್ಯ ತುಂಬಿರುವುದು ವಿಶೇಷ ಕ್ಷಣವಾಗಿತ್ತು’ ಎಂದು ಬರೆದಿದ್ದಾರೆ. 

ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಸೋತ ಬಗ್ಗೆ ಎಕ್ಸ್‌ನಲ್ಲಿ ಮೋದಿ ಪೋಸ್ಟ್‌ ಹಂಚಿಕೊಂಡಿದ್ದ ಮೋದಿ, ‘ಪ್ರೀತಿಯ ಭಾರತ ತಂಡ, ನಿಮ್ಮ ಪ್ರತಿಭೆ, ಶೃದ್ಧೆ ಗಮನಾರ್ಹ, ನಿಮ್ಮ ಆಟ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದೆ. ಇಂದು ಹಾಗೂ ಎಂದೂ ನಿಮ್ಮೊಂದಿಗೆ ನಾವಿದ್ದೇವೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.