ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಕ್ರಿಕೆಟ್ ಸಮಿತಿ ಅಧ್ಯಕ್ಷ ಮೊಹ್ಸಿನ್ ಹಸನ್ ಖಾನ್ ತಮ್ಮ ಹುದ್ದೆ ತೊರೆದಿದ್ದಾರೆ.
ಪಿಸಿಬಿ ಕ್ರಿಕೆಟ್ ಸಮಿತಿಯು, ಈ ಬಾರಿಯ ವಿಶ್ವಕಪ್ ಟೂರ್ನಿ ಸೇರಿದಂತೆ ಹೋದ ಮೂರು ವರ್ಷದಲ್ಲಿ ಪಾಕಿಸ್ತಾನ ತಂಡ ನೀಡಿದ ಪ್ರದರ್ಶನದ ಪರಾಮರ್ಶೆ ನಡೆಸಲಿದೆ.
ಮೊಹ್ಸಿನ್ ಖಾನ್ ಅವರು ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು ಎಂದು ಗುರುವಾರ ಮಂಡಳಿಯು ಹೇಳಿದೆ.
ಸದ್ಯ ಪಿಸಿಬಿಯ ವ್ಯವಸ್ಥಾಪಕ ನಿರ್ದೇಶ ಕರಾಗಿರುವ ವಾಸಿಂ ಖಾನ್ ಅವರು ಮೊಹ್ಲಿನ್ ಖಾನ್ ಅವರ ಹುದ್ದೆ ನೋಡಿಕೊಳ್ಳಲಿದ್ದಾರೆ. ಈ ಕುರಿತು ಸಭೆ ಸೇರಿದ್ದ ಪಿಸಿಬಿಯ ಆಡಳಿತಗಾರರ ಮಂಡಳಿಯು ವ್ಯವಸ್ಥಾಪಕ ನಿರ್ದೇ ಶಕರಿಗೆ ಅಧಿಕಾರ ನೀಡುವ ಕುರಿತು ನಿಯಮಾವಳಿಗೆ ತಿದ್ದುಪಡಿ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.