ಢಾಕ: ವೇತನ ಮತ್ತು ಸೌಲಭ್ಯಗಳಿಗಾಗಿ ಅನಿರ್ದಿಷ್ಟ ಮುಷ್ಕರ ಹೂಡಿರುವ ಬಾಂಗ್ಲಾದೇಶ ಕ್ರಿಕೆಟಿಗರ ಜೊತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಏಕದಿನ ತಂಡದ ನಾಯಕ ಮಷ್ರಫೆ ಮೊರ್ತಜಾ ಅವರನ್ನು ಪ್ರಧಾನಿ ಶೇಕ್ ಹಸೀನಾ ವಹಿಸಿದ್ದಾರೆ.
ಮೊರ್ತಜಾ ಮಧ್ಯಸ್ಥಿಕೆಯಲ್ಲಿ ಆಟಗಾರರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳನ್ನು ಭೇಟಿ ಮಾಡುವರು. ಈ ವಿಷಯವನ್ನು ಮಂಡಳಿ ಸಿಇಒ ನಿಜಾಮುದ್ದೀನ್ ಚೌಧರಿ ತಿಳಿಸಿದ್ದಾರೆ ಎಂದು ಕ್ರಿಕ್ ಇನ್ಫೊ ವರದಿ ಮಾಡಿದೆ.
ಅಕ್ಟೋಬರ್ 21ರಂದು ಆಟಗಾರರು ಮುಷ್ಕರ ಆರಂಭಿಸಿದ್ದಾರೆ. ಹೀಗಾಗಿ ನವೆಂಬರ್ 3ರಂದು ಆರಂಭವಾಗಲಿರುವ ಭಾರತ ಎದುರಿನ ಟ್ವೆಂಟಿ–20 ಸರಣಿ ನಡೆಯುವುದರ ಬಗ್ಗೆ ಅನುಮಾನ ಮೂಡಿದೆ.
ಈ ನಡುವೆ, ಆಟಗಾರರ ಬೇಡಿಕೆಗಳಲ್ಲಿ ಪ್ರಮುಖವಾದವುಗಳನ್ನು ಈಡೇರಿಸಲು ಮಂಗಳವಾರ ರಾತ್ರಿ ಮಂಡಳಿ ಒಪ್ಪಿಕೊಂಡಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.