ADVERTISEMENT

IPL | ಹೆಚ್ಚು ಸಲ ಶೂನ್ಯಕ್ಕೆ ಔಟ್; ಆರ್‌ಸಿಬಿಯ ಸ್ಟಾರ್ ಬ್ಯಾಟರ್‌ಗೆ ಅಗ್ರಸ್ಥಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2024, 10:47 IST
Last Updated 13 ಮೇ 2024, 10:47 IST
<div class="paragraphs"><p>ಐಪಿಎಲ್‌ ಟ್ರೋಫಿ (ಸಂಗ್ರಹ ಚಿತ್ರ)</p></div>

ಐಪಿಎಲ್‌ ಟ್ರೋಫಿ (ಸಂಗ್ರಹ ಚಿತ್ರ)

   

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಭಾನುವಾರ ನಡೆದ ಐಪಿಎಲ್‌ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 47 ರನ್‌ ಅಂತರದ ಸುಲಭ ಜಯ ಸಾಧಿಸಿತು. ಇದರೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್‌ ತಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ ಖಾತೆ ತೆರೆಯದೆ ಔಟಾದರು. ಆ ಮೂಲಕ ಅವರು ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ಸಲ ಸೊನ್ನೆ ಸುತ್ತಿದ ಬ್ಯಾಟರ್‌ ಎನಿಸಿಕೊಂಡರು. ಅವರ ನಂತರದ ಸ್ಥಾನದಲ್ಲಿರುವ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ದಿನೇಶ್ ಕಾರ್ತಿಕ್: 232 ಇನಿಂಗ್ಸ್‌ಗಳಲ್ಲಿ 18 ಸಲ

ADVERTISEMENT

ಗ್ಲೆನ್ ಮ್ಯಾಕ್ಸ್‌ವೆಲ್: 127 ಇನಿಂಗ್ಸ್‌ಗಳಲ್ಲಿ 17 ಸಲ

ರೋಹಿತ್ ಶರ್ಮಾ: 251 ಇನಿಂಗ್ಸ್‌ಗಳಲ್ಲಿ 17 ಸಲ

ಪಿಯೂಷ್ ಚಾವ್ಲಾ: 92 ಇನಿಂಗ್ಸ್‌ಗಳಲ್ಲಿ 16 ಸಲ

ಸುನಿಲ್ ನರೇನ್: 108 ಇನಿಂಗ್ಸ್‌ಗಳಲ್ಲಿ 16 ಸಲ

ರಶೀದ್ ಖಾನ್: 60 ಇನಿಂಗ್ಸ್‌ಗಳಲ್ಲಿ 15 ಸಲ

ಮಂದೀಪ್‌ ಸಿಂಗ್‌: 98 ಇನಿಂಗ್ಸ್‌ಗಳಲ್ಲಿ 15 ಸಲ

ಮನೀಷ್ ಪಾಂಡೆ: 159 ಇನಿಂಗ್ಸ್‌ಗಳಲ್ಲಿ 14 ಸಲ

ಅಂಬಟಿ ರಾಯುಡು: 187 ಇನಿಂಗ್ಸ್‌ಗಳಲ್ಲಿ 14 ಸಲ

ಹರ್ಭಜನ್ ಸಿಂಗ್: 90 ಇನಿಂಗ್ಸ್‌ಗಳಲ್ಲಿ 13 ಸಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.