ADVERTISEMENT

IPL 2024: ಐಪಿಎಲ್‌ನಲ್ಲಿ ಅತ್ಯಧಿಕ ಶತಕ; ವಿರಾಟ್ ಕೊಹ್ಲಿ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2024, 16:23 IST
Last Updated 6 ಏಪ್ರಿಲ್ 2024, 16:23 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಇಂದು (ಶನಿವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್, ‘ರನ್‌ ಮಷಿನ್’ ಖ್ಯಾತಿಯ ವಿರಾಟ್‌ ಕೊಹ್ಲಿ ಅವರು 8ನೇ ಶತಕ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಕ್ರೀಸ್ ಗೇಲ್ 6, ಜಾಸ್ ಬಟ್ಲರ್ 5, ಕನ್ನಡಿಗ ಕೆ.ಎಲ್‌. ರಾಹುಲ್ 4, ಡೇವಿಡ್ ವಾರ್ನರ್ 4, ಶೇನ್ ವಾಟ್ಸನ್ 4 ಶತಕಗಳನ್ನು ಗಳಿಸಿದ್ದಾರೆ.

ADVERTISEMENT

ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು ಜೊತೆಯಾಟವಾಡಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ ಮತ್ತು ಫಫ್ ಡುಪ್ಲೆಸಿ ಜೋಡಿ 4ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ (2,220 ರನ್), ಎರಡನೇ ಸ್ಥಾನದಲ್ಲಿ ಗೌತಮ್ ಗಂಭೀರ್ ಮತ್ತು ರಾಬಿನ್ ಉತ್ತಪ್ಪ (1,478 ರನ್), ಮೂರನೇ ಸ್ಥಾನದಲ್ಲಿ ಶಿಖರ್ ಧವನ್ ಮತ್ತು ಪೃಥ್ವಿ ಶಾ (1,461 ರನ್), 4ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಫಫ್ ಡುಪ್ಲೆಸಿ (1,432 ರನ್), 5ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ (1,401 ರನ್) ಜೋಡಿ ಇದೆ.

ಜೈಪುರದ ಸವಾಯಿ ಮಾನ್‌ಸಿಂಗ್ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದೆ.

ಆರಂಭಿಕ ಆಟಗಾರರಾದ ವಿರಾಟ್‌ ಕೊಹ್ಲಿ ಔಟಾಗದೆ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಿತ 113 ರನ್‌ ಗಳಿಸಿ ಮಿಂಚಿದರು. ಕೊಹ್ಲಿಗೆ ಸಾಥ್ ನೀಡಿದ ನಾಯಕ ಫಫ್ ಡುಪ್ಲೆಸಿ 33 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 44 ರನ್ ಗಳಿಸಿ ಚಾಹಲ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಇತ್ತ ಸೌರವ್ ಚೌಹಾಣ್ 6 ರನ್ ಗಳಿಸಿದರೆ, ಮರೂನ್ ಗ್ರೀನ್ ಔಟಾಗದೆ 5 ರನ್ ಗಳಿಸಿದರು. ರಾಜಸ್ಥಾನದ ಪರ ಯಜುವೇಂದ್ರ ಚಾಹಲ್ 2, ನಾಂದ್ರೆ ಬರ್ಗರ್ 1 ವಿಕೆಟ್‌ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.