ಅಹಮದಾಬಾದ್: ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ ಮೋಡಿಯ ಮುಂದೆ ಇಂಗ್ಲೆಂಡ್ ಲಯನ್ಸ್ ತಂಡವು ಭಾರತ 'ಎ' ತಂಡಕ್ಕೆ ಶರಣಾಯಿತು.
ಭಾನುವಾರ ಇಲ್ಲಿ ಮುಕ್ತಾಯವಾದ ‘ಟೆಸ್ಟ್‘ ಪಂದ್ಯದಲ್ಲಿ ಭಾರತ ಎ ತಂಡವು 134 ರನ್‌ಗಳಿಂದ ಜಯಿಸಿತು. ನಾಲ್ಕು ಪಂದ್ಯಗಳ ಸರಣಿಯನ್ನು ಅತಿಥೇಯ ಬಳಗವು 2–0ಯಿಂದ ಗೆದ್ದಿತು. ಶಮ್ಸ್ ಮುಲಾನಿ ಐದು ವಿಕೆಟ್ ಗೊಂಚಲು ಗಳಿಸಿದರು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 403 ರನ್‌ಗಳ ಬೃಹತ್ ಗೆಲುವಿನ ಬೆನ್ನಟ್ಟಿದ್ದ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ 72.4 ಓವರ್‌ಗಳಲ್ಲಿ 268 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಮುಲಾನಿ ಅವರೊಂದಿಗೆ ಸಾರಾಂಶ್ ಜೈನ್ (50ಕ್ಕೆ3) ಉತ್ತಮ ಜೊತೆ ನೀಡಿದರು.
ಪ್ರವಾಸಿ ಬಳಗದ ಆರಂಭಿಕ ಬ್ಯಾಟರ್ ಅಲೆಕ್ಸ್ ಲೀಸ್ (55; 96ಎ) ಮತ್ತು ಎಂಟನೇ ಕ್ರಮಾಂಕದ ಒಲಿವರ್ ರಾಬಿನ್ಸನ್ (80; 105ಎ) ಹೋರಾಟ ತೋರಿದರು. ಆದರೆ ಉಳಿದ ಪ್ರಮುಖ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 192, ಇಂಗ್ಲೆಂಡ್ ಲಯನ್ಸ್: 199. ಎರಡನೇ ಇನಿಂಗ್ಸ್: ಭಾರತ ಎ: 107.1 ಓವರ್‌ಗಳಲ್ಲಿ 409. ಇಂಗ್ಲೆಂಡ್ ಲಯನ್ಸ್: 72.4 ಓವರ್‌ಗಳಲ್ಲಿ 268 (ಅಲೆಕ್ಸ್ ಲೀಸ್ 55, ಒಲಿವರ್ ರಾಬಿನ್ಸನ್ 80, ಜೇಮ್ಸ್ ಕೋಲ್ಸ್ 31, ಶಮ್ಸ್ ಮುಲಾನಿ 60ಕ್ಕೆ5, ಸಾರಾಂಶ್ ಜೈನ್ 50ಕ್ಕೆ3) ಫಲಿತಾಂಶ: ಭಾರತ ಎ ತಂಡಕ್ಕೆ 134 ರನ್ ಜಯ. 2–0 ಯಿಂದ ಸರಣಿ. ಪಂದ್ಯಶ್ರೇಷ್ಠ: ಸಾಯಿ ಸುದರ್ಶನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.