ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾದ ಲಸಿತ್ ಮಲಿಂಗಾ ಅವರನ್ನು ನೇಮಕ ಮಾಡಲಾಗಿದೆ. ಶೇನ್ ಬಾಂಡ್ ನಿರ್ಗಮನದ ಬಳಿಕ ಖಾಲಿ ಇದ್ದ ಹುದ್ದೆಗೆ ಲಂಕಾದ ಮಾಜಿ ಕ್ರಿಕೆಟಿಗನನ್ನು ಮುಂಬೈ ಫ್ರಾಂಚೈಸಿ ನೇಮಕ ಮಾಡಿದೆ.
5 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡದಲ್ಲಿದ್ದ 40 ವರ್ಷದ ಲಸಿತ್ ಮಲಿಂಗಾ ಅವರು ಮಾರ್ಕ್ ಬೌಷರ್ ಮತ್ತು ಅವರ ಮಾಜಿ ಸಹ ಆಟಗಾರ ಕಿರೋನ್ ಪೊಲ್ಲಾರ್ಡ್ ಅವರನ್ನೊಳಗೊಂಡ ಕೋಚಿಂಗ್ ತಂಡವನ್ನು ಸೇರಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.
ಈ ಮೂವರೂ ಕ್ರಿಕೆಟಿಗರು ಬಲಿಷ್ಠ ತಂಡ ಕಟ್ಟುವಲ್ಲಿ ನೆರವಾಗುವ ನಿರೀಕ್ಷೆಯನ್ನು ಫ್ರಾಂಚೈಸಿ ವ್ಯಕ್ತಪಡಿಸಿದೆ.
'ನಾನು ಮಾರ್ಕ್, ಪಾಲಿ, ರೋಹಿತ್ ಮತ್ತು ತಂಡದ ಇತರರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ, ವಿಶೇಷವಾಗಿ ಬೌಲಿಂಗ್ ಘಟಕದೊಂದಿಗೆ. ನನಗೆ ತುಂಬಾ ಇಷ್ಟವಾದ ತಂಡ ಮತ್ತು ಮುಂಬೈನ ಯು ಪ್ರತಿಭೆಗಳ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ಎಂದು ಮಲಿಂಗ ಹೇಳಿದ್ದಾರೆ.
ತಮ್ಮ ಅಮೋಘ ಬೌಲಿಂಗ್ ಕೌಶಲ್ಯದಿಂದ ಮಲಿಂಗ ಶ್ರೀಲಂಕಾ ಮತ್ತು ಐಪಿಎಲ್‌ನ ಮುಂಬೈ ತಂಡಗಳ ಹಲವು ಗೆಲುವಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2008ರಿಂದ 13 ವರ್ಷಗಳ ಕಾಲ ಮಲಿಂಗ ಮುಂಬೈ ಇಂಡಿಯನ್ಸ್ ಜೊತೆ ಕಳೆದಿದ್ದಾರೆ. 11 ವರ್ಷ ಆಟಗಾರನಾಗಿ ಮತ್ತು 2018ರಲ್ಲಿ ಬೌಲಿಂಗ್ ಮೆಂರ್ ಆಗಿ ಕೆಲಸ ಮಾಡಿದ್ಧಾರೆ. ಈ ವರ್ಷ ಮುಂಬೈ ನ್ಯೂಯಾರ್ಕ್ ತಂಡದ ಆಡಳಿತ ಮಂಡಳಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.