ADVERTISEMENT

ಪ್ರಶಸ್ತಿಗಾಗಿ ತಮಿಳುನಾಡು–ಬರೋಡಾ ಹಣಾಹಣಿ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಫೈನಲ್ ಇಂದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 17:43 IST
Last Updated 30 ಜನವರಿ 2021, 17:43 IST
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್   

ಅಹಮದಾಬಾದ್: ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿರುವ ತಮಿಳುನಾಡು ತಂಡವು ಭಾನುವಾರ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಫೈನಲ್‌ನಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ.

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಅನುಭವದ ನಾಯಕತ್ವದಲ್ಲಿ ತಮಿಳುನಾಡು ಈ ಹಂತಕ್ಕೆ ಬಂದಿದೆ. ಆದರೆ ಗುಂಪು ಹಂತದಲ್ಲಿ ಮತ್ತು ಎಂಟರ ಘಟ್ಟದಲ್ಲಿ ಛಲದ ಆಟದಿಂದ ಕೇದಾರ್ ದೇವಧರ್ ನಾಯಕತ್ವದ ಬರೋಡಾ ಬಳಗವು ಸೆಡ್ಡು ಹೊಡೆಯಲು ಸಿದ್ಧವಾಗಿದೆ.

ಇದೇ ಕಾರಣಕ್ಕೆ ಸರ್ದಾರ್‌ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಕುತೂಹಲ ಕೆರಳಿಸಿದೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸ್‌ಗಳ ಗಮನ ಸೆಳೆಯಲು ಆಟಗಾರರು ಛಲದ ಆಟ ತೋರಿಸುವ ನಿರೀಕ್ಷೆ ಇದೆ.

ADVERTISEMENT

ತಮಿಳುನಾಡು ತಂಡದ ಬ್ಯಾಟಿಂಗ್‌ಗೆ ಅರುಣ ಕಾರ್ತಿಕ್, ಎನ್. ಜಗದೀಶ್ ಮತ್ತು ದಿನೇಶ್ ಕಾರ್ತಿಕ್ ಅವರೇ ಪ್ರಮುಖರು. ಬೌಲಿಂಗ್‌ನಲ್ಲಿ ಎಂ. ಮೊಹಮ್ಮದ್, ಸಂದೀಪ್ ವಾರಿಯರ್ ಅವರು ಬೌಲಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದಾರೆ.

ಬರೋಡಾ ತಂಡದಲ್ಲಿ ವಿಷ್ಣು ಸೋಳಂಕಿ ಉತ್ತಮ ಲಯದಲ್ಲಿದ್ದಾರೆ. ನಾಯಕ ಕೇದಾರ್, ಕಾರ್ತಿಕ್ ಕಾಕಡೆ ಮತ್ತು ನಿನಾದ್ ರಾಂಧ್ವಾ ಅವರು ಸೆಮಿಫೈನಲ್‌ನಲ್ಲಿ ಉತ್ತಮವಾಗಿ ಆಡಿದ್ದರು.

ಲುಕ್ಮನ್ ಮೆರಿವಾಲಾ, ಆತಿಥ್ ಶೇಟ್ ಮತ್ತು ನಿನಾದ್ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಪಂದ್ಯ ಆರಂಭ: ರಾತ್ರಿ 7ರಿಂದ

ನೇರಪ್ರಸಾರ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.