ADVERTISEMENT

ಟಿ20 ವಿಶ್ವಕಪ್ ವೀಸಾ ಪ್ರಕ್ರಿಯೆ: ತವರಿಗೆ ಮರಳಿದ ಮುಸ್ತಫಿಜುರ್

ಪಿಟಿಐ
Published 3 ಏಪ್ರಿಲ್ 2024, 16:19 IST
Last Updated 3 ಏಪ್ರಿಲ್ 2024, 16:19 IST
<div class="paragraphs"><p>ಮುಸ್ತಫಿಜುರ್ ರಹಮಾನ್</p></div>

ಮುಸ್ತಫಿಜುರ್ ರಹಮಾನ್

   

ನವದೆಹಲಿ: ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ವೀಸಾ ಪ್ರಕ್ರಿಯೆ ಪೂರ್ಣಗೊಳಿಸಲು ಬಾಂಗ್ಲಾದೇಶಕ್ಕೆ ಮರಳಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಎಡಗೈ ವೇಗದ ಬೌಲರ್ ಮುಸ್ತಫಿಜುರ್ ರಹಮಾನ್ ಶುಕ್ರವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ತಂಡದ ಮುಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಸಿಎಸ್‌ಕೆ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ. ಶುಕ್ರವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್‌  ತಂಡವನ್ನು ಎದುರಿಸಲಿದೆ.

ADVERTISEMENT

‘ವೀಸಾ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಮುಸ್ತಿಫಿಜುರ್ ಅವರು ತವರಿಗೆ ಮರಳಿದ್ದಾರೆ. ಪಾಸ್‌ಪೋರ್ಟ್‌ ಮರಳಿ ಪಡೆದ ಬಳಿಕ ಹಿಂತಿರುಗುತ್ತಾರೆ. ಗುರುವಾರ ವೀಸಾಗೆ ಅರ್ಜಿ ಸಲ್ಲಿಸಲು ಕೊನೆ ದಿನ‘ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದರು. 

7 ವಿಕೆಟ್ ಕಬಳಿಸಿರುವ ರೆಹಮಾನ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.