ADVERTISEMENT

IND v AUS: ನೇಥನ್ 8 ವಿಕೆಟ್, ಆಸ್ಟ್ರೇಲಿಯಾ ಗೆಲುವಿಗೆ 76 ರನ್ ಗುರಿ ನೀಡಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2023, 12:06 IST
Last Updated 2 ಮಾರ್ಚ್ 2023, 12:06 IST
ನೇಥನ್ ಲಯನ್ ಅವರು ಅಭಿನಂದಿಸುತ್ತಿರುವ ಆಸ್ಟ್ರೇಲಿಯಾ ತಂಡದ ಆಟಗಾರರು
ನೇಥನ್ ಲಯನ್ ಅವರು ಅಭಿನಂದಿಸುತ್ತಿರುವ ಆಸ್ಟ್ರೇಲಿಯಾ ತಂಡದ ಆಟಗಾರರು   

ಇಂದೋರ್: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭಾರತ 165 ರನ್‌ಗಳಿಗೆ ಆಲೌಟ್ ಆಗಿದೆ.

ಮೊದಲ ಇನಿಂಗ್ಸ್‌ನಲ್ಲಿ 88 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಭಾರತ 60.3 ಓವರ್‌ಗಳಲ್ಲಿ 163 ರನ್ ಗಳಿಸಿ ಆಲೌಟ್‌ ಆಯಿತು. ಇದರೊಂದಿಗೆ ಪ್ರವಾಸಿ ತಂಡಕ್ಕೆ 76 ರನ್ ಗುರಿ ನೀಡಿದಂತಾಯಿತು.

ಭಾರತ ತಂಡವು 32 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ (12) ಹಾಗೂ ಶುಭಮನ್ ಗಿಲ್ (5) ವಿಕೆಟ್ ಪತನವಾಯಿತು. ವಿರಾಟ್ ಕೊಹ್ಲಿ (13) ಹಾಗೂ ರವೀಂದ್ರ ಜಡೇಜ (7) ಅವರಿಗೂ, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಮತ್ತೊಂದೆಡೆ ಕಲಾತ್ಮಕ ಇನಿಂಗ್ಸ್ ಕಟ್ಟಿದ ಚೇತೇಶ್ವರ ಪೂಜಾರ 59, ಶ್ರೇಯಸ್ ಅಯ್ಯರ್ 26 ರನ್‌ ಗಳಿಸಿ ತಂಡ ಮುನ್ನಡೆ ಗಳಿಸಲು ನೆರವಾದರು.

ADVERTISEMENT

ಆಸ್ಟ್ರೇಲಿಯಾದ ಪರ ನೇಥನ್ ಲಯನ್ ಎಂಟು ವಿಕೆಟ್ ಕಬಳಿಸಿದರು.

ಈ ಮೊದಲು ಭಾರತದ 109 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 197 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ 88 ರನ್‌ಗಳ ಮುನ್ನಡೆ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.