ನವದೆಹಲಿ: ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡುತ್ತಿರುವ ಬಹುತೇಕ ಆಟಗಾರರಿಗೆ ಮಂಡಿ ಮತ್ತು ಭುಜದ ಗಾಯಗಳು ಹೆಚ್ಚಾಗಿ ಕಾಡಿವೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು (ಎನ್‌ಸಿಎ) ತಿಳಿಸಿದೆ.
2019ರ ಏಪ್ರಿಲ್ ನಿಂದ ಮಾರ್ಚ್ 2020ರವರೆಗಿನ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿರುವ ಎನ್‌ಸಿಎ ಈ ವಿಷಯವನ್ನು ಉಲ್ಲೇಖಿಸಿದೆ.
ಈ ಅವಧಿಯಲ್ಲಿ 218 ಪುರುಷ ಮತ್ತು 44 ಮಹಿಳಾ ಕ್ರಿಕೆಟಿಗರು ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು 48 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.
ಇದರಲ್ಲಿ ಒಂದು ಋತುವಿನ ಪೈ ಚಾರ್ಟ್ ಕೂಡ ಇದೆ. ಅದರ ಪ್ರಕಾರ; ಒಟ್ಟು 38 ಕ್ರಿಕೆಟಿಗರು ಭುಜದ ಗಾಯಗಳಿಂದ ಬಳಲಿದ್ದರು. ಇನ್ನೂ 34 ಆಟಗಾರರು ಮೊಣಕಾಲು ಗಾಯವನ್ನು ಅನುಭವಿಸಿದ್ದಾರೆ. ಇದರಲ್ಲಿ ಕ್ರೀಡೆಗೆ ಮರಳಿದವರಲ್ಲಿ ಎರಡು ವರ್ಷದ ಅವಧಿಯಲ್ಲಿ ಅಸ್ಥಿಮಜ್ಜೆ ಸಮಸ್ಯೆ ಕಾಣಿಸಿಕೊಂಡಿದ್ದು. ಶಸ್ತ್ರಚಿಕಿತ್ಸೆಗೊಳಗಾದವರ ಸಂಖ್ಯೆಯು ಶೇ 74ರಷ್ಟಿದೆ ಎಂದೂ ತಿಳಿಸಲಾಗಿದೆ.
ಹಿಮ್ಮಡಿ (ಶೇ 11.48), ತೊಡೆಯ ಸ್ನಾಯು (ಶೇ 10.49) ಮತ್ತು ಬೆನ್ನೆಲುಬು (ಶೇ 7.54) ಗಾಯದಿಂದ ಬಳಲುತ್ತಾರೆ.
ಎನ್‌ಸಿಎನಲ್ಲಿ ಸೌಲಭ್ಯಗಳ ಉನ್ನತೀಕರಣ ಸೇರಿದಂತೆ ಸುಮಾರು 24 ಅಭಿವೃದ್ಧಿ ಯೋಜನೆಗಳ ಕುರಿತೂ ಈ ವರದಿಯಲ್ಲಿ ಹೇಳಲಾಗಿದೆ. 576 ಕೋಚ್‌ಗಳಿಗೆ ತರಬೇತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಏಕಕಾಲಕ್ಕೆ ಭಾಗವಹಿಸಲು ಅವಕಾಶವಿರುಂತಹ ಸೌಲಭ್ಯಗಳಣ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಈ ಕುರಿತು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೆ ಈ ಹಿಂದೆ ಚರ್ಚೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.