ADVERTISEMENT

ಶಕೀಬ್ ಬದಲು ಬಾಂಗ್ಲಾ ತಂಡದಲ್ಲಿ ಹೊಸಮುಖ

ಏಜೆನ್ಸೀಸ್
Published 18 ಅಕ್ಟೋಬರ್ 2024, 18:16 IST
Last Updated 18 ಅಕ್ಟೋಬರ್ 2024, 18:16 IST
<div class="paragraphs"><p>ಶಕೀಬ್ ಅಲ್ ಹಸನ್‌</p></div>

ಶಕೀಬ್ ಅಲ್ ಹಸನ್‌

   

ಢಾಕಾ: ಸುರಕ್ಷತೆಯ ಆತಂಕದಿಂದ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಅವರು ಬಾಂಗ್ಲಾದೇಶಕ್ಕೆ ಮರಳುವ ಯೋಜನೆ ರದ್ದುಗೊಳಿಸಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಕ್ರಿಕೆಟ್‌ ಟೆಸ್ಟ್‌ಗೆ ಶುಕ್ರವಾರ ಪ್ರಕಟಿಸಲಾದ ತಂಡದಲ್ಲಿ ಅವರ ಬದಲು ಹೊಸ ಸ್ಪಿನ್ನರ್‌ಗೆ ಅವಕಾಶ ನೀಡಲಾಗಿದೆ.

‌ಈಗ ಪ್ರಕಟವಾದ ತಂಡದಲ್ಲಿ ಅವರ ಬದಲು 23 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್‌ ಹಸನ್ ಮುರಾದ್ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.

ADVERTISEMENT

15 ಆಟಗಾರರ ತಂಡದ ನಾಯಕರಾಗಿ ನಜ್ಮುಲ್ ಹಸನ್ ಶಾಂತೊ ಮುಂದುವರಿದಿದ್ದಾರೆ.

37 ವರ್ಷ ವಯಸ್ಸಿನ ಶಕೀಲ್‌ ಇತ್ತೀಚಿಗೆ ಬಾಂಗ್ಲಾದೇಶ ತಂಡವು ಭಾರತ ಪ್ರವಾಸದ ಕೈಗೊಂಡಿದ್ದ ವೇಳೆ  ನಿವೃತ್ತಿ ನಿರ್ಧಾರ ಪ್ರಕಟಿಸಿದ್ದು ಆ ವೇಳೆ, ತವರಿನಲ್ಲಿ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶದಲ್ಲಿ ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶಕೀಬ್ ಅವಾಮಿ ಲೀಗ್‌ನಿಂದ ಸಂಸತ್‌ ಸದಸ್ಯರಾಗಿದ್ದರು. ಆಗಸ್ಟ್‌ನಲ್ಲಿ ಇದೇ ಪಕ್ಷಕ್ಕೆ ಸೇರಿದ ಪ್ರಧಾನಿ ಶೇಕ್‌ ಹಸೀನಾ ವಿರುದ್ಧ ನಡೆದ ವಿದ್ಯಾರ್ಥಿ ದಂಗೆಯಲ್ಲಿ ಜನರು ಈ ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದಂಗೆಯ ವೇಳೆ ಮೌನ ವಹಿಸಿದ್ದಕ್ಕೆ ಶಕೀಬ್ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಕ್ಷಮೆ ಯಾಚಿಸಿದ್ದರು.

ದಂಗೆಯ ವೇಳೆ ದೇಶ ತೊರೆದ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಮೀರ್‌ಪುರ ಟೆಸ್ಟ್‌ ಪಂದ್ಯಕ್ಕೆ ಬಂದಲ್ಲಿ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಆಶ್ವಾಸನೆ ನೀಡಿದೆ. ಟೆಸ್ಟ್ ಪಂದ್ಯ ಸೋಮವಾರ ಆರಂಭವಾಗಲಿದೆ.

‘ಮುಂದೆ ಎಲ್ಲಿ ಹೋಗಬೇಕೆಂಬ ಬಗ್ಗೆ ನನಗೇ ಖಚಿತವಿಲ್ಲ. ಆದರೆ ನಾನು ತವರಿಗೆ ಹೋಗುವುದಿಲ್ಲವೆಂಬುದು ಖಚಿತ’ ಎಂದು ಶಕೀಬ್ ಇಎಸ್‌ಪಿಎನ್‌ ಕ್ರಿಕ್‌ಇನ್ಫೊಗೆ ತಿಳಿಸಿದ್ದಾರೆ.

ತಂಡ ಇಂತಿದೆ: ನಜ್ಮುಲ್ ಹಸನ್ ಶಾಂತೊ (ನಾಯಕ), ಶಾದ್ಮನ್ ಇಸ್ಲಾಂ, ಮಹಮದುಲ್‌ ಹಸನ್ ಜಾಯ್, ಝಾಕಿರ್ ಖಾನ್‌, ಮೊಮಿನುಲ್ ಹಕ್‌ ಶೋವ್ರಬ್‌, ಮುಶ್ಫಿಕುರ್ ರಹಿಮ್‌, ಲಿಟ್ಟನ್ ದಾಸ್ (ವಿಕೆಟ್ ಕೀಪರ್‌), ಜೇಕರ್ ಅಲಿ ಅನಿಕ್‌, ಮಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್‌, ತಸ್ಕಿನ್ ಅಹ್ಮದ್, ಹಸನ್ ಮಹಮುದ್‌, ನಹಿದ್ ರಾಣಾ, ಹಸನ್ ಮುರಾದ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.