ADVERTISEMENT

ಐಪಿಎಲ್‌ನಲ್ಲಿ ಹೊಸ ನಿಯಮ: ಟಾಸ್‌ ಬಳಿಕ ಅಂತಿಮ ಇಲೆವೆನ್‌ ಆಯ್ಕೆ

ಪಿಟಿಐ
Published 23 ಮಾರ್ಚ್ 2023, 16:00 IST
Last Updated 23 ಮಾರ್ಚ್ 2023, 16:00 IST
   

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಟೂರ್ನಿಯಲ್ಲಿ ಈ ಬಾರಿ ಹೊಸ ನಿಯಮ ಜಾರಿಗೊಳಿಸಲಾಗಿದ್ದು, ಪಂದ್ಯದ ಟಾಸ್‌ ಆದ ಬಳಿಕ ಅಂತಿಮ ಇಲೆವೆನ್‌ ಆಯ್ಕೆ ಮಾಡುವ ಅವಕಾಶವನ್ನು ತಂಡಗಳಿಗೆ ನೀಡಲಾಗಿದೆ.

ಈಗ ಇರುವ ನಿಯಮದ ಪ್ರಕಾರ ಎರಡೂ ತಂಡಗಳ ನಾಯಕರು ಆಡುವ ಹನ್ನೊಂದರ ಬಳಗದ ಪಟ್ಟಿಯನ್ನು ಟಾಸ್‌ಗೆ ಮುನ್ನವೇ ಎದುರಾಳಿ ತಂಡಕ್ಕೆ ನೀಡಬೇಕಿತ್ತು.

‘ಪ್ರತಿ ತಂಡದ ನಾಯಕರು ಆಡುವ 11 ಮಂದಿ ಆಟಗಾರರು ಮತ್ತು ಐವರು ಸಬ್‌ಸ್ಟಿಟ್ಯೂಟ್‌ ಫೀಲ್ಡರ್‌ಗಳ ಹೆಸರನ್ನು ಟಾಸ್‌ ಬಳಿಕ ಮ್ಯಾಚ್‌ ರೆಫರಿಗೆ ನೀಡಬಹುದು’ ಎಂದು ಹೊಸ ನಿಯಮ ಹೇಳಿದೆ. ಟಾಸ್‌ ಬಳಿಕ ಅಂತಿಮ ಹನ್ನೊಂದರ ಬಳಗದಲ್ಲಿ ಏನಾದರೂ ಬದಲಾವಣೆ ಬಯಸಿದರೆ, ಹೊಸ ನಿಯಮವು ಅದಕ್ಕೆ ಅವಕಾಶ ಕಲ್ಪಿಸಿದೆ. ಪಂದ್ಯದ ಆರಂಭದವರೆಗೂ ತಂಡದಲ್ಲಿ ಬದಲಾವಣೆ ಮಾಡಬಹುದು.

ADVERTISEMENT

ಬೆಸ್ಟೊ ಅಲಭ್ಯ: ಇಂಗ್ಲೆಂಡ್‌ನ ಬ್ಯಾಟರ್‌ ಜಾನಿ ಬೆಸ್ಟೊ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ. ಅವರಿಗೆ ಐಪಿಎಲ್‌ನಲ್ಲಿ ಆಡಲು ನಿರಾಕ್ಷೇಪಣಾ ಪತ್ರವನ್ನು ನೀಡಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ನಿರಾಕರಿಸಿದೆ ಎಂದು ‘ಕ್ರಿಕ್‌ಬಝ್‘ ವೆಬ್‌ಸೈಟ್‌ ವರದಿ ಮಾಡಿದೆ.

ಆದರೆ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿದೆ. ಪಂಜಾಬ್‌ ಕಿಂಗ್ಸ್‌ ತಂಡ ಲಿವಿಂಗ್‌ಸ್ಟೋನ್‌ ಮತ್ತು ಬೈಸ್ಟೊ ಅವರನ್ನು ಕ್ರಮವಾಗಿ ₹ 11.50 ಹಾಗೂ ₹ 6.75 ಕೋಟಿ ನೀಡಿ ತನ್ನದಾಗಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.