ADVERTISEMENT

ಎಂಸಿಎ ಅಧ್ಯಕ್ಷ ಸ್ಥಾನಕ್ಕೆ ಜುಲೈ 23ರಂದು ಚುನಾವಣೆ

ಪಿಟಿಐ
Published 24 ಜೂನ್ 2024, 16:24 IST
Last Updated 24 ಜೂನ್ 2024, 16:24 IST
<div class="paragraphs"><p>ಕ್ರಿಕೆಟ್ (ಸಾಂದರ್ಭಿಕ ಚಿತ್ರ)</p></div>

ಕ್ರಿಕೆಟ್ (ಸಾಂದರ್ಭಿಕ ಚಿತ್ರ)

   

ಮುಂಬೈ: ಅಮೋಲ್ ಕಾಳೆ ಅವರ ನಿಧನದಿಂದ ತೆರವಾದ ಮುಂಬೈ ಕ್ರಿಕೆಟ್‌ ಸಂಸ್ಥೆಯ (ಎಂಸಿಎ) ಅಧ್ಯಕ್ಷ ಸ್ಥಾನಕ್ಕೆ ಜುಲೈ 23ರಂದು ಚುನಾವಣೆ ನಿಗದಿಯಾಗಿದೆ.

47 ವರ್ಷದ ಕಾಳೆ ಅವರು ಜೂನ್‌ 9ರಂದು ಅಮೆರಿಕದಲ್ಲಿ ಹೃದಯಸ್ತಂಭನದಿಂದ ನಿಧನರಾಗಿದ್ದರು. ನ್ಯೂಯಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಭಾರತ– ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಅವರು ಅಲ್ಲಿಗೆ ತೆರಳಿದ್ದರು.

ADVERTISEMENT

2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅವರು ಭಾರತ ತಂಡದ ಮಾಜಿ ಆಟಗಾರ ಸಂದೀಪ್ ಪಾಟೀಲ್ ಅವರನ್ನು ಸೋಲಿಸಿ ಅಧ್ಯಕ್ಷಗಾದಿಗೆ ಏರಿದ್ದರು.

ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ ಮಾಜಿ ಉಪ ಆಯುಕ್ತ ಅವಿನಾಶ್ ತುಕಾರಾಂ ಸನಾಸ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಜುಲೈ 23ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.