ADVERTISEMENT

ಬೆಂಗಳೂರಿನ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಶೀಘ್ರ ಉದ್ಘಾಟನೆ: ಜಯ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2024, 14:33 IST
Last Updated 3 ಆಗಸ್ಟ್ 2024, 14:33 IST
<div class="paragraphs"><p>ನೂತನ ಎನ್‌ಸಿಎಯ ಮೈದಾನವೊಂದರ ನೋಟ</p></div>

ನೂತನ ಎನ್‌ಸಿಎಯ ಮೈದಾನವೊಂದರ ನೋಟ

   

ಎಕ್ಸ್ ಚಿತ್ರ (ಜಯ್ ಶಾ)

ಬೆಂಗಳೂರು: 45 ಅಭ್ಯಾಸ ಪಿಚ್ ಹಾಗೂ ಒಲಿಂಪಿಕ್ಸ್‌ ಗಾತ್ರದ ಈಜುಕೊಳ ಸೇರಿ ಹಲವು ಅತ್ಯಾಧುನಿಕ ಸೌಕರ್ಯಗಳು ಇರುವ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌.ಸಿ.ಎ) ಶೀಘ್ರದಲ್ಲಿ ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಎಕ್ಸ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಬಿಸಿಸಿಐನ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಹೊಸ ಎನ್‌.ಸಿ.ಎ.ನಲ್ಲಿ ಮೂರು ವಿಶ್ವದರ್ಜೆಯ ಆಟದ ಮೈದಾನಗಳು, 45 ಅಭ್ಯಾಸ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ಸ್ ಗಾತ್ರದ ಈಜುಕೊಳ, ತರಬೇತಿ, ಚೇತರಿಕೆ ಹಾಗೂ ಕ್ರೀಡಾ ವಿಜ್ಞಾನದ ವ್ಯವಸ್ಥೆಗಳು ಇರಲಿವೆ’ ಎಂದು ಹೇಳಿದ್ದಾರೆ.

ಇದು ದೇಶದ ಈಗಿನ ಮತ್ತು ಭವಿಷ್ಯದ ಕ್ರಿಕೆಟಿಗರು ಉತ್ತಮ ವಾತಾವರಣದಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಲಿದೆ ಎಂದು ಅವರು ನುಡಿದಿದ್ದಾರೆ.

ಸದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎನ್‌.ಸಿ.ಎ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯ ಭಾರತದಲ್ಲಿ ಎನ್‌.ಸಿ.ಎ. ನಿರ್ಮಿಸುವ ಇರಾದೆಯಲ್ಲಿ ಬಿ.ಸಿ.ಸಿ.ಐ. ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.