ADVERTISEMENT

IND vs NZ Test: ನ್ಯೂಜಿಲೆಂಡ್ ತಂಡ ಪ್ರಕಟ; ಗಾಯದ ಹೊರತಾಗಿಯೂ ಕೇನ್‌ಗೆ ಸ್ಥಾನ

ಪಿಟಿಐ
Published 9 ಅಕ್ಟೋಬರ್ 2024, 4:18 IST
Last Updated 9 ಅಕ್ಟೋಬರ್ 2024, 4:18 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ರಾಯಿಟರ್ಸ್ ಚಿತ್ರ)

ಆಕ್ಲೆಂಡ್: ಆತಿಥೇಯ ಭಾರತ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.

ADVERTISEMENT

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್, ಅವರನ್ನು ತಂಡದಲ್ಲಿ ಹೆಸರಿಸಲಾಗಿದೆ.

ಆದರೆ ವಿಲಿಯಮ್ಸನ್ ಪ್ರಯಾಣ ವಿಳಂಬವಾಗಲಿದೆ ಎಂದು ತಂಡದ ಮೂಲಗಳು ತಿಳಿಸಿವೆ. ವಿಲಿಯಮ್ಸನ್ ಸ್ಥಾನವನ್ನು ಹೊಸಮುಖ ಮಾರ್ಕ್ ಚಾಪ್‌ಮನ್ ತುಂಬಲಿದ್ದಾರೆ.

ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೇನ್ ವಿಲಿಯಮ್ಸನ್, ಭಾರತ ವಿರುದ್ಧ ಪೂರ್ತಿ ಸರಣಿಗೆ ಲಭ್ಯರಾಗುವುದು ಅನುಮಾನವೆನಿಸಿದೆ. ಸಂಪೂರ್ಣವಾಗಿ ಗುಣಮುಖರಾದ ಬಳಿಕವಷ್ಟೇ ತಂಡವನ್ನು ಸೇರಿಕೊಳ್ಳಲಿದ್ದಾರೆ.

ತಂಡವನ್ನು ಟಾಮ್ ಲೇಥಮ್ ಮುನ್ನಡೆಸಲಿದ್ದಾರೆ. ಡೆವೊನ್ ಕಾನ್ವೆ, ಮ್ಯಾಟ್ ಹೆನ್ರಿ, ಡೆರಿಲ್ ಮಿಚೆಲ್ ಹಾಗೂ ಟಿಮ್ ಸೌಥಿ ಮುಂತಾದ ಅನುಭವಿ ಆಟಗಾರು ತಂಡದಲ್ಲಿದ್ದಾರೆ.

ಮೈಕಲ್ ಬ್ರೇಸ್‌ವೆಲ್ ಮೊದಲನೇ ಪಂದ್ಯಕ್ಕೆ ಮಾತ್ರ ಲಭ್ಯರಾಗಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು ಬಳಿಕ ತವರಿಗೆ ಹಿಂತಿರುಗಲಿದ್ದಾರೆ. ಅಂತಿಮ ಎರಡು ಪಂದ್ಯಗಳಿಗೆ ಈಶ್ ಸೋಧಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಆರಂಭವಾಗಲಿದೆ.

ನ್ಯೂಜಿಲೆಂಡ್ ತಂಡ ಇಂತಿದೆ:

ಟಾಮ್ ಲೇಥಮ್ (ನಾಯಕ),

ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್),

ಡೆವೊನ್ ಕಾನ್ವೆ,

ಡೆರಿಲ್ ಮಿಚೆಲ್,

ವಿಲ್ ಓರೊರ್ಕ್,

ಅಜಾಜ್ ಪಟೇಲ್,

ಗ್ಲೆನ್ ಪಿಲಿಪ್ಸ್,

ರಚಿನ್ ರವೀಂದ್ರ,

ಮಿಚೆಲ್ ಸ್ಯಾಂಟ್ನರ್,

ಬೆನ್ ಸೀರ್ಸ್,

ಟಿಮ್ ಸೌಥಿ,

ವಿಲ್ ಯಂಗ್,

ಮೈಕಲ್ ಬ್ರೇಸ್‌ವೆಲ್ (ಮೊದಲ ಟೆಸ್ಟ್),

ಈಶ್ ಸೋಧಿ (2ನೇ ಹಾಗೂ 3ನೇ ಟೆಸ್ಟ್),

ಮಾರ್ಕ್ ಚಾಪ್‌ಮನ್*

ಕೇನ್ ವಿಲಿಯಮ್ಸನ್.

ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:

ಅ.16ರಿಂದ ಅ.20: ಮೊದಲ ಟೆಸ್ಟ್, ಬೆಂಗಳೂರು

ಅ.24ರಿಂದ ಅ.28: ಎರಡನೇ ಟೆಸ್ಟ್, ಪುಣೆ

ನ.1ರಿಂದ ನ.5: ಮೂರನೇ ಟೆಸ್ಟ್, ಮುಂಬೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.