ADVERTISEMENT

ನ್ಯೂಜಿಲೆಂಡ್‌ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಯಿತೇ ಪಾಕಿಸ್ತಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2021, 5:36 IST
Last Updated 18 ಸೆಪ್ಟೆಂಬರ್ 2021, 5:36 IST
ರಮೀಜ್ ರಾಜಾ
ರಮೀಜ್ ರಾಜಾ   

ಲಾಹೋರ್‌: ಪಾಕ್‌ ಪ್ರವಾಸ ಮೊಟಕುಗೊಳಿಸಿದ ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 'ಪಾಕ್‌ ತಂಡದ ಅಭಿಮಾನಿಗಳು ಮತ್ತು ಆಟಗಾರರ ಬಗ್ಗೆ ಯೋಚಿಸಿದಾಗ ತುಂಬಾ ಬೇಸರವಾಗುತ್ತಿದೆ. ಭದ್ರತೆಯ ಕಾರಣ ಹೇಳಿ ನ್ಯೂಜಿಲೆಂಡ್‌ ತಂಡವು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಆ ಮೂಲಕ ಪ್ರವಾಸದಿಂದ ಹೊರನಡೆಯುವುದು ಅತ್ಯಂತ ನಿರಾಶಾದಾಯಕ ವಿಷಯವಾಗಿದೆ. ನ್ಯೂಜಿಲೆಂಡ್‌ ಯಾವ ಜಗತ್ತಿನಲ್ಲಿ ವಾಸಿಸುತ್ತಿದೆ? ಐಸಿಸಿ ಮುಂದೆ ನಾವು ಹೇಳುವ ಮಾತನ್ನು ನ್ಯೂಜಿಲೆಂಡ್‌ ಕೇಳಿಸಿಕೊಳ್ಳಲಿದೆ' ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಶುಕ್ರವಾರ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು. ಆದರೆ, ಈ ಪ್ರವಾಸವನ್ನು ಮೊಟಕುಗೊಳಿಸಲು ನ್ಯೂಜಿಲೆಂಡ್‌ ತಂಡವು ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ಮಾಜಿ ವೇಗಿ ಶೋಯಬ್‌ ಅಖ್ತರ್‌, ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಆಜಂ ಹಾಗೂ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರು ನ್ಯೂಜಿಲೆಂಡ್‌ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.