ADVERTISEMENT

ಕೇನ್ ವಿಲಿಯಮ್ಸನ್‌ಗೆ ಕೋವಿಡ್; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಲಥಾಮ್ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2022, 12:44 IST
Last Updated 10 ಜೂನ್ 2022, 12:44 IST
ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌
ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌   

ನಾಟಿಂಗ್‌ಹ್ಯಾಮ್‌: ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರಿಗೆ ಕೋವಿಡ್–19 ದೃಢಪಟ್ಟಿದೆ. ಹೀಗಾಗಿ ಅವರು ಇಂಗ್ಲೆಂಡ್‌ ವಿರುದ್ಧ ಇಂದಿನಿಂದ ಆರಂಭವಾಗಿರುವ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ.

ಕೇನ್‌ ಅನುಪಸ್ಥಿತಿಯಲ್ಲಿ ಟಾಮ್‌ ಲಥಾಮ್‌ ಅವರು ತಂಡ ಮುನ್ನಡೆಸುತ್ತಿದ್ದಾರೆ. ಕೇನ್‌ ಬದಲು ಹ್ಯಾಮಿಶ್‌ ರುದರ್‌ಫೋರ್ಡ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ.

ಕೇನ್‌ಗೆ ಕೋವಿಡ್ ದೃಢಪಟ್ಟಿರುವ ಬಗ್ಗೆ ಮತ್ತು ಅವರುಪಂದ್ಯದಿಂದ ಹೊರಗುಳಿದಿರುವ ಬಗ್ಗೆ ಮುಖ್ಯ ಕೋಚ್‌ ಗ್ರೇ ಸ್ಟೀಡ್‌ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯವಿಲಿಯಮ್ಸನ್‌ ಐದು ದಿನ ಪ್ರತ್ಯೇಕವಾಸದಲ್ಲಿರಲಿದ್ದಾರೆ.

ADVERTISEMENT

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಕೇನ್‌ ಪಡೆ ಸೋಲು ಕಂಡಿದೆ. ಸರಣಿ ಸೋಲು ತಪ್ಪಿಸಿಕೊಳ್ಳಲು ಈ ಪಂದ್ಯ ಮಹತ್ವದ್ದಾಗಿದೆ.

ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಿರುವ ನ್ಯೂಜಿಲೆಂಡ್‌, ಉತ್ತಮ ಆರಂಭ ಕಂಡಿದೆ. ಊಟದ ವಿರಾಮದ ಹೊತ್ತಿಗೆ ನಾಯಕ ಟಾಮ್‌ (26) ಮತ್ತು ವಿಲ್‌ ಯಂಗ್‌ (47) ವಿಕೆಟ್‌ ಒಪ್ಪಿಸಿದ್ದು, ತಂಡದ ಮೊತ್ತ 108 ರನ್ ಆಗಿದೆ. ಡೆವೋನ್‌ ಕಾನ್ವೆ (10) ಹಾಗೂ ಹೆನ್ರಿ ನಿಕೋಲ್ಸ್‌ (14) ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.