ಮೌಂಟ್ ಮಾಂಗನೂಯಿ:ನ್ಯೂಜಿಲೆಂಡ್–ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 353 ರನ್ ಗಳಿಗೆ ಆಲೌಟ್ ಆಗಿದೆ.
ಆತಿಥೇಯ ಬೌಲರ್‌ಗಳ ಎದುರು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್‌ಆಲ್ರೌಂಡರ್ ಬೆನ್ ಸ್ಟೋಕ್ಸ್ 91 ರನ್ ಗಳಿಸಿ ಶತಕದಂಚಿನಲ್ಲಿ ಔಟಾದರು. 146 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿ ಬಾರಿಸಿ ರಂಜಿಸಿದರು. ಉಳಿದಂತೆರೋರಿ ಬರ್ನ್ಸ್ (52), ಜೋ ಡೆನ್ಲಿ (74) ಅರ್ಧ ಶತಕ ಸಿಡಿಸಿದರು.
ಟಿಮ್ ಸೌಥಿ 4 ವಿಕೆಟ್ ಪಡೆದರೆ,ನೀಲ್ ವಾಗ್ನರ್ 3,ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 2 ಹಾಗೂ ಟ್ರೆಂಟ್ ಬೌಲ್ಟ್ 1 ವಿಕೆಟ್ ಕಿತ್ತರು.
ಸದ್ಯ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡ ಎರಡನೇ ದಿನದಂತ್ಯಕ್ಕೆ 51ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 144 ರನ್ ಗಳಿಸಿದೆ. ನಾಯಕ ಕೇನ್ ವಿಲಿಯಮ್ಸನ್(51) ಅರ್ಧ ಶತಕ ಗಳಿಸಿ ಔಟಾದರು.
ಸದ್ಯ ಹೆನ್ರಿ ನಿಕೋಲಸ್ ಹಾಗೂ ಬಿಜೆ ವ್ಯಾಟ್ಲಿಂಗ್ ಕ್ರಮವಾಗಿ 26 ಮತ್ತು 6 ರನ್ ಗಳಿಸಿ ಆಡುತ್ತಿದ್ಧಾರೆ. ಇಂಗ್ಲಿಷ್ ವೇಗಿ ಸ್ಯಾಮ್ ಕರನ್ 2 ವಿಕೆಟ್ ಪಡೆದರೆ, ಸ್ಟೋಕ್ಸ್ ಮತ್ತು ಜಾಕ್ ಲೀಚ್ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.