ADVERTISEMENT

IND vs NZ : ರೋಹಿತ್ ಶರ್ಮಾ ‘ಸೂಪರ್’ ಬ್ಯಾಟಿಂಗ್: ಕೊಹ್ಲಿ ಪಡೆಗೆ ಟಿ20 ಸರಣಿ

ನ್ಯೂಜಿಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:19 IST
Last Updated 29 ಜನವರಿ 2020, 13:19 IST
   

ಹ್ಯಾಮಿಲ್ಟನ್‌:ನ್ಯೂಜಿಲೆಂಡ್‌ ನಾಯಕಕೇನ್‌ ವಿಲಿಯಮ್ಸ್‌ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಟೈ ಆದ ಪಂದ್ಯವನ್ನು ವಿರಾಟ್‌ ಕೊಹ್ಲಿ ಬಳಗ ಸೂಪರ್‌ ಓವರ್‌ನಲ್ಲಿ ಗೆದ್ದುಕೊಂಡಿತು. ಹೀಗಾಗಿ ಐದು ಪಂದ್ಯಗಳ ಸರಣಿಯನ್ನು ಭಾರತ 3–0 ಯಿಂದ ಗೆದ್ದುಕೊಂಡಿತು.

ಇಲ್ಲಿನ ಸೆಡನ್‌ ಪಾರ್ಕ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್‌ಗಳಲ್ಲಿ 179 ರನ್‌ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಕಿವೀಸ್‌ ಕೂಡ 5 ವಿಕೆಟ್‌ ಕಳೆದುಕೊಂಡುಇಷ್ಟೇ ರನ್‌ ಗಳಿಸಲು ಶಕ್ತವಾಯಿತು. ಹೀಗಾಗಿ ಪಂದ್ಯ ರೋಚಕ ‘ಟೈ’ ಆಗಿತ್ತು.

ಕಿವೀಸ್‌ ಪಡೆಗೆ ಕೊನೆಯ ಓವರ್‌ನಲ್ಲಿ 9 ರನ್‌ ಗಳಿಸಬೇಕಿತ್ತು. ಆದರೆ ಈ ಓವರ್‌ನಲ್ಲಿ ನಾಯಕ ಕೇನ್‌ ವಿಲಿಯಮನ್ಸ್‌ ಮತ್ತು ರಾಸ್‌ ಟೇಲರ್‌ ವಿಕೆಟ್‌ ಕಬಳಿಸಿದ ಶಮಿ ಕೇವಲ 8 ರನ್‌ ಬಿಟ್ಟುಕೊಟ್ಟರು.ಹೀಗಾಗಿ ಸೂಪರ್‌ ಓವರ್‌ ಮೊರೆ ಹೋಗಲಾಗಿತ್ತು.

ADVERTISEMENT

ಸೂಪರ್‌ ಓವರ್‌ನಲ್ಲಿಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ 1 ಓವರ್‌ನಲ್ಲಿ 17 ರನ್‌ ಕಲೆಹಾಕಿತ್ತು. ಈ ಗುರಿ ಎದುರು ಭಾರತ 20ರನ್‌ ಗಳಿಸಿ ವಿಜಯಿ ಎನಿಸಿತು. ರೋಹಿತ್‌ ಮೊದಲ ಎಸೆತದಲ್ಲಿ 2, ಎರಡನೇ ಎಸೆತದಲ್ಲಿ 1 ರನ್‌ ಗಳಿಸಿದರು. ಮೂರನೇ ಎಸೆತವನ್ನುರಾಹುಲ್ ಬೌಂಡರಿಗಟ್ಟಿ ನಂತರದ ಎಸೆತದಲ್ಲಿ 1 ರನ್‌ ಪಡೆದರು.

ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಗೆಲುವಿಗೆ 10 ರನ್‌ ಬೇಕಿತ್ತು. ರೋಹಿತ್‌ ಶರ್ಮಾ ಆ ಎರಡೂ ಎಸೆತಗಳನ್ನು ಸಿಕ್ಸರ್‌ ಗಟ್ಟಿ ಭಾರತಕ್ಕೆ ಜಯ ತಂದುಕೊಟ್ಟರು.ಭಾರತ ಪರ ಬೂಮ್ರಾ ಹಾಗೂ ನ್ಯೂಜಿಲೆಂಡ್‌ ಪರ ಟಿಮ್‌ ಸೌಥಿ ಸೂಪರ್‌ ಓವರ್‌ ಎಸೆದರು.

ಇದರೊಂದಿಗೆ ಕೊಹ್ಲಿ ಪಡೆಯುನ್ಯೂಜಿಲೆಂಡ್‌ನಲ್ಲಿ ಮೊದಲ ಸರಣಿ ಗೆದ್ದ ದಾಖಲೆ ಬರೆಯಿತು.

ಶತಕದ ಹೊಸ್ತಿಲಲ್ಲಿ ಎಡವಿದ ವಿಲಿಯಮ್ಸನ್‌
ಕೇವಲ 48 ಎಸೆತಗಳನ್ನು ಎದುರಿಸಿದ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ 197 ಸ್ಟ್ರೈಕ್‌ ರೇಟ್‌ನಲ್ಲಿ 6 ಸಿಕ್ಸರ್‌, 8ಬೌಂಡರಿ ಸಹಿತ 95 ರನ್‌ ಗಳಿಸಿದರು. ಕೊನೆಯ ಓವರ್‌ನಲ್ಲಿ ಶಮಿಗೆ ವಿಕೆಟ್‌ ಒಪ್ಪಿಸಿ ಶತಕ ತಪ್ಪಿಸಿಕೊಂಡರು.

ಅನುಭವಿ ರಾಸ್‌ ಟೇಲರ್‌ ಕೊನೆಯಲ್ಲಿ ಗುಡುಗಿದರಾದರೂ ಕೊನೆ ಎಸೆತದಲ್ಲಿ ಔಟಾಗಿ ತಮ್ಮ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು.

ಭಾರತ ಪರ ಶಾರ್ದೂಲ್‌ ಠಾಕೂರ್‌ ಎರಡು ವಿಕೆಟ್‌ ಪಡದರೆ, ಯಜವೇಂದ್ರ ಚಾಹಲ್‌ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. ಅನುಭವಿ ಜಸ್‌ಪ್ರೀತ್‌ ಬೂಮ್ರಾ ನಾಲ್ಕು ಓವರ್‌ಗಳಲ್ಲಿ 45 ರನ್‌ ನೀಡಿ ದುಬಾರಿಯಾದರು.

ರೋಹಿತ್ ಮಿಂಚು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರಕೆ.ಎಲ್‌. ರಾಹುಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 9 ಓವರ್‌ಗಳಲ್ಲಿ 89 ರನ್‌ ಗಳಿಸಿದ್ದರು.

ಕೇವಲ 40 ಎಸೆತಗಳನ್ನು ಎದುರಿಸಿದ ರೋಹಿತ್‌ 3 ಸಿಕ್ಸರ್‌ ಮತ್ತು 6 ಬೌಂಡರಿ ಸಹಿತ 65 ರನ್‌ ಗಳಿಸಿದ್ದರು.

ಸ್ಕೋರ್‌ ವಿವರ
ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 179

ರೋಹಿತ್‌ ಶರ್ಮಾ65,ವಿರಾಟ್‌ ಕೊಹ್ಲಿ 38
ಹಮೀಷ್ ಬೆನೆಟ್ 54 ರನ್‌ಗೆ 3 ವಿಕೆಟ್‌
ಮಿಚೆಲ್ ಸ್ಯಾಂಟನರ್ 37 ರನ್‌ಗೆ 1 ವಿಕೆಟ್‌
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 13ರನ್‌ಗೆ 1 ವಿಕೆಟ್‌

ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179
ಕೇನ್‌ ವಿಲಿಯಮ್ಸನ್‌ 95, ಮಾರ್ಟಿನ್‌ ಗಪ್ಟಿಲ್‌ 31
ಶಾರ್ದೂಲ್‌ ಠಾಕೂರ್‌ 21ಕ್ಕೆ 2 ವಿಕೆಟ್‌
ಯಜವೇಂದ್ರ ಚಾಹಲ್‌ 36ಕ್ಕೆ 1 ವಿಕೆಟ್‌
ರವೀಂದ್ರ ಜಡೇಜಾ 23ಕ್ಕೆ 1 ವಿಕೆಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.