ವೆಲಿಂಗ್ಟನ್: ನ್ಯೂಜಿಲೆಂಡ್‌ನ ತ್ರಿವಳಿ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ಕೈಲ್ ಜೆಮೀಸನ್ ದಾಳಿಗೆ ಕಂಗೆಟ್ಟಭಾರತ ತಂಡ, ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.
ಭಾರತೀಯ ಕಾಲಮಾನ ಪ್ರಕಾರ ಮುಂಜಾನೆ 4.00 ಗಂಟೆಗೆ ಇಲ್ಲಿನ ಬೇಸಿನ್ ರಸರ್ವ್ ಕ್ರೀಡಾಂಗಣದಲ್ಲಿಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ವೇಗಿಗಳು ನಾಯಕ ಕೇನ್ ವಿಲಿಯಮ್ಸನ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದರು.
4.2ನೇ ಓವರ್‌ನಲ್ಲಿಪೃಥ್ವಿ ಶಾ (16) ವಿಕೆಟ್ ಪಡೆದಸೌಥಿ, ಕೇನ್ ಪಡೆಗೆ ಮೊದಲ ಯಶಸ್ಸು ತಂದುಕೊಟ್ಟರು.ಬಳಿಕ ಬಂದ ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ (11)ಹಾಗೂ ನಾಯಕ ವಿರಾಟ್ ಕೊಹ್ಲಿ (2)ಅವರು ಹೆಚ್ಚುಹೊತ್ತು ನಿಲ್ಲಲು ಜೆಮೀಸನ್ ಬಿಡಲಿಲ್ಲ.
ಹೀಗಾಗಿಕೇವಲ 40 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಆರಂಭಿಕ ಮಯಂಕ್ ಅಗರವಾಲ್ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಕೆಲಕಾಲ ನೆರವಾದರು. ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಕಲೆಹಾಕಿತು. ಈ ಜೋಡಿಯನ್ನು ಅನುಭವಿ ಬೌಲ್ಟ್ 35ನೇ ಓವರ್‌ನಲ್ಲಿ ಬೇರ್ಪಡಿಸಿದರು.
34 ರನ್ ಗಳಿಸಿ ನಿಧಾನವಾಗಿ ಆಡುತ್ತಿದ್ದ ಮಯಂಕ್, ಬೌಲ್ಟ್ ಬೌಲಿಂಗ್‌ನಲ್ಲಿ ಜೆಮೀಸನ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಹನುಮ ವಿಹಾರಿ ಕೇವಲ 7 ರನ್ ಗಳಿಸಿ ಔಟಾದರು.
ಕಿವೀಸ್ ಪರ ಜೆಮೀಸನ್ 38 ರನ್ ನೀಡಿ 3 ವಿಕೆಟ್ ಪಡೆದರೆ, ಸೌಥಿ ಮತ್ತು ಬೌಲ್ಟ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
55ನೇ ಓವರ್ ವೇಳೆ ಮಳೆ ಸುರಿದಿರುವುದರಿಂದಮೊದಲ ದಿನದಾಟವನ್ನು ನಿಲ್ಲಿಸಲಾಗಿದೆ. ಸದ್ಯ ಭಾರತ 5 ವಿಕೆಟ್ ನಷ್ಟಕ್ಕೆ 122 ರನ್ ಪೇರಿಸಿದೆ. 38 ರನ್ ಕಲೆಹಾಕಿರುವ ರಹಾನೆ ಮತ್ತು 10ಗಳಿಸಿರುವರಿಷಭ್ ಪಂತ್ ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೆಸ್ಟ್ ಸರಣಿಗೂ ಮೊದಲು ನಡೆದಐದು ಪಂದ್ಯಗಳಟಿ–20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ಭಾರತ, ಮೂರು ಪಂದ್ಯಗಳಏಕದಿನ ಸರಣಿಯಲ್ಲಿ ವೈಟ್‌ವಾಷ್‌ಗೆ ಒಳಗಾಗಿತ್ತು.
ಟೇಲರ್‌ಗೆ 100ನೇ ಪಂದ್ಯ:ನ್ಯೂಜಿಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ರಾಸ್ ಟೇಲರ್‌ಗೆ ಇದು 100ನೇ ಪಂದ್ಯ. ಆ ಮೂಲಕ ಅವರು ಎಲ್ಲ ಮಾದರಿಯಲ್ಲೂ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿ ಪಡೆದರು.
ಅವರು ಚುಟುಕು ಕ್ರಿಕೆಟ್‌ನಲ್ಲಿ 100 ಮತ್ತು ಏಕದಿನ ಮಾದರಿಯಲ್ಲಿ 231 ಪಂದ್ಯ ಆಡಿದ್ದಾರೆ.ಟಿ20 ಕ್ರಿಕೆಟ್‌ನ100ನೇ ಪಂದ್ಯವನ್ನೂ ಭಾರತದ ವಿರುದ್ಧವೇ ಆಡಿದ್ದರು.
ತಂಡಗಳು: ಭಾರತ:ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಮಯಂಕ್ ಅಗರವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ,ಜಸ್‌ಪ್ರೀತ್ ಬೂಮ್ರಾ.
ನ್ಯೂಜಿಲೆಂಡ್:ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್,ಹೆನ್ರಿ ನಿಕೋಲ್ಸ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‌ಹೋಂ, ಟಾಮ್ ಲಥಾಮ್, ಬಿ.ಜೆ. ವಾಟ್ಲಿಂಗ್ (ವಿಕೆಟ್ ಕೀಪರ್),ಅಜಾಜ್ ಪಟೇಲ್, ಟಿಮ್ ಸೌಥಿ,ಟ್ರೆಂಟ್ ಬೌಲ್ಟ್, ಕೈಲ್ ಜೆಮೀಸನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.