ADVERTISEMENT

ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಮಹಿಳಾ ತಂಡ: ಬೌಲಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 1:59 IST
Last Updated 8 ಫೆಬ್ರುವರಿ 2019, 1:59 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ಆಕ್ಲೆಂಡ್‌: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟ್ವಿಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್‌ ತಂಡಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡಕ್ಕೆ ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಮೊದಲ ಪಂದ್ಯದಲ್ಲಿ ದಾಖಲೆ ಮಾಡಿದ್ದಸ್ಮೃತಿ ಮಂದಾನ ಮತ್ತು ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರನ್ನು ಹೊರತುಪಡಿಸಿದರೆ ಉಳಿ ಆಟಗಾರ್ತಿಯರುಎದುರಾಳಿ ಬೌಲರ್‌ಗಳ ದಾಳಿಯನ್ನು ಮೆಟ್ಟಿ ನಿಲ್ಲಲು ಆಗಿರಲಿಲ್ಲ.

ADVERTISEMENT

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ),ಸ್ಮೃತಿ ಮಂದಾನ,ಪ್ರಿಯಾ ಪೂನಿಯಾ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ತನಿಯಾ ಭಾಟಿಯಾ, ಪೂನಂ ಯಾದವ್‌, ರಾಧಾ ಯಾದವ್‌, ಅನುಜಾ ಪಾಟೀಲ್‌, ದಯಾಳನ್ ಹೇಮಲತಾ, ಮಾನಸಿ ಜೋಶಿ, ಅರುಂಧತಿ ರೆಡ್ಡಿ

ನ್ಯೂಜಿಲೆಂಡ್‌: ಆ್ಯಮಿ ಸಾಟರ್‌ವೇಟ್‌ (ನಾಯಕಿ), ಸೂಸಿ ಬೇಟ್ಸ್‌, ಬೆರ್ನಾಡಿನ್‌ ಬೆಜುಡನಾಟ್‌, ಸೋಫಿ ಡಿವೈನ್‌, ಹೇಲಿ ಜೆನ್ಸೆನ್‌, ಕ್ಯಾಟ್ಲಿನ್ ಗುರೆ, ಲೇ ಕ್ಯಾಸ್ಪರೆಕ್‌, ಅಮೆಲಿಯಾ ಕೆರ್‌, ಫ್ರಾನ್ಸಿಸ್‌ ಮೆಕೆ, ಕಾತಿ ಮಾರ್ಟಿನ್‌, ರೋಸ್‌ಮೇರಿ ಮೇರ್‌, ಹನಾ ರೋ, ಲೀ ತಹುಹು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.